alex Certify 1.28 ಕೋಟಿ ರೂ.ಗೆ ಖಾಸಗಿ ಬೀಚ್‌ ಜೊತೆ ಇಡೀ ಊರು ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.28 ಕೋಟಿ ರೂ.ಗೆ ಖಾಸಗಿ ಬೀಚ್‌ ಜೊತೆ ಇಡೀ ಊರು ಲಭ್ಯ

Haunted' Scottish Village With a Beach, 17th Century Ruins is Selling For Rs 1.28 Crore

ಸ್ಕಾಟ್ಲೆಂಡ್‌ನಲ್ಲಿ ಸುಂದರವಾದ ತಾಣವೊಂದರಲ್ಲಿ ಪ್ರಾಪರ್ಟಿ ಮಾಡುವ ಆಸೆ ನಿಮ್ಮದೇ ? ಹಾಗಾದರೆ, ಬ್ರಿಟನ್‌ನ ಉತ್ತರದಲ್ಲಿರುವ ಈ ದೇಶದ ಹಳ್ಳಿಯೊಂದನ್ನು ನೀವು ಬರೀ $173000 (1.28 ಕೋಟಿ ರೂಪಾಯಿ) ತೆತ್ತು ಖರೀದಿ ಮಾಡಬಹುದಾಗಿದೆ.

ಏನಪ್ಪಾ ಅಂದ್ರೆ, ಈ ಊರನ್ನು ನೀವು ಒಬ್ಬರೇ ಒಬ್ಬರೊಂದಿಗೆ ಹಂಚಿಕೊಳ್ಳಬೇಕಿದೆ — ಅದು ಯಾರು ಅಂದ್ರೆ ಇಲ್ಲಿ ವಾಸಿಸುತ್ತಿರುವ ದೆವ್ವ !

ನಿಮ್ಮ ಬಳಿ ಇದೆಯಾ ಹಳೆ ನಾಣ್ಯ-ನೋಟು…? ಕೂತಲ್ಲಿಯೇ ಸಿಗುತ್ತೆ ಸಾವಿರಾರು ರೂ.

ಪರ್ತ್‌‌ಶೈರ್‌‌ನ ಲಾಚ್‌ ಟೇ ತೀರದಲ್ಲಿರುವ ಓಲ್ಡ್‌ ವಿಲೇಜ್ ಆಫ್‌ ಲಾವರ್ಸ್ ಹೆಸರಿನ ಈ ಊರಿನಲ್ಲಿ 17ನೇ ಶತಮಾನದ ಪಳೆಯುಳಿಕೆಗಳು ಇದ್ದು, ಒಟ್ಟಾರೆ 3.31 ಎಕರೆಯಷ್ಟು ವಿಸ್ತಾರವಾಗಿದೆ. ಈ ಊರಿನೊಂದಿಗೆ ಖಾಸಗಿ ಬೀಚ್‌ ಸಹ ಸಿಗಲಿದ್ದು, ಈ ಪ್ರದೇಶದಲ್ಲಿ ಮೀನುಗಾರಿಕೆಯ ಪರ್ಮಿಟ್ ಸಹ ಸಿಗಲಿದೆ ಎನ್ನಲಾಗಿದೆ.

ಈ ಊರಿನಲ್ಲಿರುವ 17ನೇ ಶತಮಾನದ ಕಟ್ಟಡದಲ್ಲಿ ಒಂದು ದಿ ಹೌಸ್ ಆಫ್‌ ಲಾವರ್ಸ್. ಈ ಕಟ್ಟಡದಲ್ಲಿ ದಿ ಲೇಡಿ ಆಫ್ ಪಾವರ್ಸ್ ವಾಸಿಸುತ್ತಿದ್ದರು ಹಾಗೂ ಅವರ ಆತ್ಮವೇ ಇಲ್ಲೆಲ್ಲಾ ಓಡಾಡುತ್ತಿದೆ ಎಂದು ನಂಬಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...