alex Certify ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: 4 ದಿನದಲ್ಲೇ 1.04 ಕೋಟಿ ರೂ. ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ: 4 ದಿನದಲ್ಲೇ 1.04 ಕೋಟಿ ರೂ. ಆದಾಯ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಬರತೊಡಗಿದ್ದಾರೆ. ಸಾರ್ವಜನಿಕ ದರ್ಶನದ ನಾಲ್ಕನೇ ದಿನವಾದ ಸೋಮವಾರ ಭಾರಿ ಸಂಖ್ಯೆಯ ಭಕ್ತರು ಬಂದಿದ್ದಾರೆ.

ದರ್ಶನ ಆರಂಭವಾದ ನಾಲ್ಕು ದಿನದ ಅವಧಿಯಲ್ಲಿ ನೇರ ದರ್ಶನದ ಟಿಕೆಟ್ ಮಾರಾಟ ಮತ್ತು ಲಾಡು ಮಾರಾಟ ದಿಂದ 1.04 ಕೋಟಿ ರೂ. ಸಂಗ್ರಹವಾಗಿದೆ. 300ರೂ., 1000 ರೂ. ಮುಖಬೆಲೆಯ ಟಿಕೆಟ್ ಗಳು ಹಾಗೂ ಲಾಡುಗಳ ಮಾರಾಟದಿಂದ ಸುಮಾರು 1.04 ಕೋಟಿ ರೂ. ಆದಾಯ ನಾಲ್ಕು ದಿನದಲ್ಲಿ ಸಂಗ್ರಹವಾಗಿದೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಂಬೆ ದರ್ಶನ ಪಡೆಯಲಿದ್ದಾರೆ. ಜೆಡಿಎಸ್ ಪಕ್ಷದ ಎಲ್ಲಾ 19 ಶಾಸಕರು, ಮಾಜಿ ಸಚಿವರು, ಮುಖಂಡರು ಕೂಡ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...