alex Certify ಮಹಿಳೆಗೆ ಮೆಸೇಜ್ ಕಳಿಸಿದ್ದಕ್ಕೆ ಟೈಲರ್ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಗೆ ಮೆಸೇಜ್ ಕಳಿಸಿದ್ದಕ್ಕೆ ಟೈಲರ್ ಹತ್ಯೆ

ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಮಹಿಳೆಗೆ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ ಮಾಡಲಾಗಿದೆ. ಊಪಿನಹಳ್ಳಿಯ ಗಂಗಾಧರ(40) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.

ಭರತ್, ಸೋಮು, ಚಿರು, ಅಭಿ ಎಂಬುವವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಟೈಲರ್ ಕೆಲಸ ಮಾಡಿಕೊಂಡಿದ್ದ ಗಂಗಾಧರ್ ಭರತ್ ಪತ್ನಿಗೆ ಮೆಸೇಜ್ ಕಳುಹಿಸಿದ್ದಾರೆನ್ನಲಾಗಿದೆ. ಗಂಗಾಧರನನ್ನು ಅಪಹರಿಸಿ ಶ್ರವಣಬೆಳಗೊಳ ರಸ್ತೆಯ ಜನಿವಾರ ಸಮೀಪ ಮನ ಬಂದಂತೆ ಥಳಿಸಲಾಗಿದೆ. ಗಂಗಾಧರ್ ಸ್ನೇಹಿತ ಇದನ್ನು ಗಮನಿಸಿ ಸಮೀಪಕ್ಕೆ ಹೋದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಗಂಗಾಧರ್ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...