ಹಾಸನ ಜಿಲ್ಲೆಯಲ್ಲಿ ಲಾಕ್ಡೌನ್ ಆದೇಶ ರದ್ದು ಮಾಡಲಾಗಿದೆ. ಸಚಿವ ಗೋಪಾಲಯ್ಯ ಅವರು ಲಾಕ್ಡೌನ್ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದರೆ ಜನತಾ ಕರ್ಫ್ಯೂ ಮುಂದುವರಿಸಲಿದ್ದು, ಲಾಕ್ ಡೌನ್ ನಿರ್ಧಾರ ಕೈಬಿಡಲಾಗಿದೆ.
ವಾರದಲ್ಲಿ 4 ದಿನ ಲಾಕ್ ಡೌನ್ ಜಾರಿ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿದ ಸಚಿವರು ಲಾಕ್ಡೌನ್ ನಿರ್ಧಾರ ಆದೇಶ ವಾಪಸ್ ಪಡೆದಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.