alex Certify ಪ್ರವಾಸಿಗರೇ ಗಮನಿಸಿ : ನಾಳೆಯಿಂದ ‘ಹಸಿರುಮಕ್ಕಿ ಲಾಂಚ್’ ಸೇವೆ ಪುನಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರೇ ಗಮನಿಸಿ : ನಾಳೆಯಿಂದ ‘ಹಸಿರುಮಕ್ಕಿ ಲಾಂಚ್’ ಸೇವೆ ಪುನಾರಂಭ

ಸಾಗರ : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆ ನಾಳೆ ( ಜುಲೈ 10) ಸೋಮವಾರದಿಂದ ಪುನಾರಂಭಗೊಳ್ಳಲಿದೆ.

ಶರಾವತಿ ಹಿನ್ನೀರಿನ ಭಾಗದ ಸಂಪರ್ಕ ಸೇತುವೆಯಾಗಿದ್ದ ಹಸಿರುಮಕ್ಕಿ ಲಾಂಚ್ ನಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೂ ಓಡಾಟ ಸ್ಥಗಿತಗೊಳಿಸಲಾಗಿತ್ತು, ನಾಳೆಯಿಂದ ಲಾಂಚ್ ಸೇವೆ ಪುನಾರಂಭಗೊಳ್ಳಲಿದೆ. ಸದ್ಯ ಬೈಕ್ ಮತ್ತು ಕಾರು ಸಾಗಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ನೀರಿನ ಪ್ರಮಾಣ ಹೆಚ್ಚಳವಾದ ಬಳಿಕ ಬಸ್ ಗಳ ಓಡಾಟಕ್ಕೂ ಅನುಮತಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ನೀರಿನ ಮಟ್ಟ ತೀವ್ರವಾಗಿ ಕುಸಿದು ತಳದಲ್ಲಿರುವ ಅವಶೇಷಗಳು ಹೊರಬರಲಾರಂಭಿಸಿದ ಹಿನ್ನೆಲೆ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

 

Related News

No Posts
No Posts

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...