ಬೆಂಗಳೂರು : ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಪಡಿತರರ ಖಾತೆಗೆ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಅನ್ನಭಾಗ್ಯದ ಹಣ ಜಮಾ ಆಗಬೇಕಿದ್ರೆ ತಪ್ಪದೇ ನೀವು ಈ ಕೆಲಸ ಮಾಡಬೇಕು.
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ಇರುವುದರಿಂದ ನಿಮಗೆ ಹಣ ಬಂದಿಲ್ಲ. ಈ ಬಗ್ಗೆ ಗೊಂದಲಗಳಿದ್ದರೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅನ್ನಭಾಗ್ಯ ಸ್ಕೀಮ್ ಪಡೆಯಲು ತಮ್ಮ ರೇಷನ್ ಕಾರ್ಡ್ ಅರ್ಹವಾಗಿದೆಯೇ ಎಂಬುದನ್ನು ಚೆಕ್ ಮಾಡಬಹುದು. DBT ಕರ್ನಾಟಕ ಆಪ್ ಕೂಡ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ವರ್ಗಾವಣೆ ಆಗಿರುವ ವಿವರವನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
ಪಡಿತರ ಚೀಟಿಯಲ್ಲಿ ಇರುವ ಮುಖ್ಯಸ್ಥನ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಇರಬೇಕು, ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು
ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿ, NPCI mapping ಆಗಿರಬೇಕು.ಸ್ಟೇಟಸ್ ಚೆಕ್ ಮಾಡುವಾಗ ಕೆಲವರಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅಥವಾ KYC ಅಪ್ಡೇಟ್ ಮಾಡಿಸಬೇಕು ಎನ್ನುವ ಸೂಚನೆ ಸಿಗುತ್ತಿದೆ. ಈ ಕೆಲಸ ಮಾಡಿಲ್ಲವಾದರೆ ನಿಮಗೆ ಹಣ ಬರೋದಿಲ್ಲ. ಈ ಎಲ್ಲಾ ಕೆಲಸ ಮಾಡಿದವರಿಗೆ PAV response not at received ಎಂದು ಕಾಣುತ್ತಿದೆ. ಈ ರೀತಿ ಬಂದರೆ ನೀವು ಕನಫ್ಯೂಸ್ ಆಗಬೇಡಿ. PAV ಎಂದರೆ Payment adjustment voture ಎಂದರ್ಥ. ಸ್ಟೇಟಸ್ ಚೆಕ್ ಮಾಡುವಾಗ ಈ ರೀತಿ ಬಂದರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ನೀಡಿಲ್ಲ ಎಂಬ ಎಂದರ್ಥ. ಈ ರೀತಿ ಬಂದರೆ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ, ಕೆಲವೇ ದಿನಗಳಲ್ಲಿ ಹಣ ವರ್ಗಾವಣೆಯಾಗುತ್ತದೆ ಎಂದು ಅರ್ಥ.