ಹಿರಿಯ ಮಹಿಳೆಯೊಬ್ಬರು ತಮ್ಮೊಳಗಿನ ಜೀವನೋತ್ಸಾಹವನ್ನು ಹೊರತಂದು ಯುವತಿಯರೂ ನಾಚುವಂತೆ ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ತಮ್ಮ ಫಿಟ್ನೆಸ್ ಯಾವ ಮಟ್ಟದ್ದು ಎಂದು ತೋರುವಂತೆ ಬ್ಯಾಕ್ ರೋಲ್‌ಗಳನ್ನೂ ಮಾಡಿ ತೋರಿದ್ದಾರೆ ಈ ಚಿರಯುವತಿ. ಇವರ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“20 ವರ್ಷದ ಹುಡುಗಿಯರು ಇಡೀ ದಿನ ಮೈಕೈನೋವು ಎಂದು ಹೇಳುತ್ತಿರುತ್ತಾರೆ. 60 ವರ್ಷದ ಇವರನ್ನು ನೋಡಿ……” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರಿಗೆಲ್ಲಾ ಫಿಟ್ನೆಸ್ ಗೋಲ್‌ಗಳನ್ನು ಕೊಟ್ಟಿದ್ದಾರೆ ಈ ಹಿರಿಯ ಮಹಿಳೆ.