25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಖಡಕ್ ಮಂಗೋಲಿಯಲ್ಲಿ ನಡೆದಿದೆ. ಅವತಾರ್ ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದನು. ಕೂಡಲೇ ಆತನ ಮನೆಯವರು ಸೆಕ್ಟರ್ 6ರಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಅವತಾರ್ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡುತ್ತಿದ್ದಂತೆಯೇ ಅವತಾರ್ ಕುಟುಂಬಸ್ಥರು ಗದ್ದಲ ಶುರುವಿಟ್ಟಿದ್ದಾರೆ ಮಾತ್ರವಲ್ಲದೇ ವೈದ್ಯರ ಕ್ಯಾಬಿನ್ನ ಕಿಟಕಿ ಗಾಜುಗಳನ್ನು ಮುರಿದು ಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪಂಚಕುಲಾ ಜಿಲ್ಲೆಯ ಸೆಕ್ಟರ್ 7ರ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಮೃತ ಅವತಾರ್ ನಿವಾಸ ಕೂಡ ಸೆಕ್ಟರ್ 7 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಬರುತ್ತದೆ.
ಅವತಾರ್ ಸಾವಿನ ಬಳಿಕ ಆಕ್ರೋಶಗೊಂಡ ಕುಟುಂಬ ಸದಸ್ಯರು ಎಮೆರ್ಜೆನ್ಸಿ ವಾರ್ಡ್ನ ಗಾಜುಗಳನ್ನು ಒಡೆದು ನಾಶ ಮಾಡಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ದುರ್ನಡತೆಯ ಬಗ್ಗೆ ವೈದ್ಯರಿಂದ ಯಾವುದೇ ದೂರುಗಳು ಬಂದಿಲ್ಲ. ಡಾ. ಮುಕ್ತ ಕುಮಾರ್ರ ಕ್ಯಾಬಿನ್ನ್ನೂ ನಾಶ ಮಾಡಲಾಗಿದೆ. ಈ ಬಗ್ಗೆ ಅವರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸೆಕ್ಟರ್ 7 ಠಾಣೆಯ ಎಸ್ಹೆಚ್ಓ ಮಹಾಬೀರ್ ಸಿಂಗ್ ಹೇಳಿಕೆ ನೀಡಿದ್ದಾರೆ.