ಲೂದಿಯಾನ: ಹರಿಯಾಣದಲ್ಲಿ ಕಿಸಾನ್ ಸಮ್ಮೇಳನ ನಡೆಯುತ್ತಿದೆ. ಹೈನುಗಾರಿಕೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ವೇಳೆದಲ್ಲಿ ಹಸುವೊಂದು ನೆರೆದಿದ್ದವರನ್ನು ಅಚ್ಚರಿಗೊಳಿಸಿದೆ. 24 ಗಂಟೆಗಳಲ್ಲಿ 72 ಲೀಟರ್ ಹಾಗೂ 400 ಎಂಎಲ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.
ಹೌದು, ಲೂಧಿಯಾನದ ಜಾಗರಾನ್‌ನಲ್ಲಿ ನಡೆಯುತ್ತಿರುವ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹಸು ಹೊಸ ದಾಖಲೆ ನಿರ್ಮಾಣ ಮಾಡಿದೆ. ಒಂದೇ ದಿನದಲ್ಲಿ 72 ಲೀಟರ್, 400 ಎಂಎಲ್ ಹಾಲು ಕೊಟ್ಟಿದೆ. ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಹಸುವೊಂದು 70 ಲೀಟರ್ ಹಾಲು ಕೊಟ್ಟಿತ್ತು. ಇದೀಗ ಈ ದಾಖಲೆ ಮುರಿದು, ಹೊಸ ದಾಖಲೆ ನಿರ್ಮಿಸಿದೆ. ಈ ಮೇಳದಲ್ಲಿ ನಡೆದ ಸ್ಪರ್ಧೆಯಲ್ಲಿ ಬೇರೆ ಬೇರೆ ರಾಜ್ಯಗಳ 30 ಗ್ರಾಮಗಳು ಭಾಗವಹಿಸಿದ್ದವು.
ಇನ್ನು ಈ ಹಸು ಮಾಲೀಕರಿಗೆ ಭಾರತ ಸರ್ಕಾರ ಮತ್ತು ಪಿಡಿಎಫ್‌ಎಯಿಂದ ಟ್ರ್ಯಾಕ್ಟರ್ ನೀಡಿ ಗೌರವಿಸಲಾಗಿದೆ. ಬಳಿಕ ಮಾತನಾಡಿದ ಎಚ್‌ಎಫ್ ಹಸು ಮಾಲೀಕ, ಹಸು ಮಾಡಿದ ಹೊಸ ದಾಖಲೆ ತುಂಬಾ ಖುಷಿ ಕೊಟ್ಟಿದೆ. ಸರ್ಕಾರ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ಈ ಉದ್ಯಮದತ್ತ ವಾಲುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದಿದ್ದಾರೆ.