ಹರಿಯಾಣದ ಹಿಸಾರ್ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ ಗರ್ಮುಕ್ತೇಶ್ವರ ಜಿಲ್ಲೆಯ ಸುಂದರ್ ಪಾಲ್ ಎಂಬವರು ದಾಖಲಿಸಿದ ದೂರನ್ನ ಆಧರಿಸಿ ಹನ್ಸಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲಿರುವ ಮಾಹಿತಿಯ ಪ್ರಕಾರ ಮೂವರು ಯುವಕರು ಟ್ರ್ಯಾಕ್ಟರ್ನ್ನು ಅದನ್ನ 3.7 ಲಕ್ಷ ರೂಪಾಯಿಗೆ ಸುಂದರ್ಪಾಲ್ಗೆ ಮಾರಾಟ ಮಾಡಿದ್ದಾರೆ. ಕೆಲ ತಿಂಗಳಿನಿಂದ ಸುಂದರ್ಪಾಲ್ ಒಳ್ಳೆಯ ಟ್ರ್ಯಾಕ್ಟರ್ ಖರೀದಿ ಮಾಡಲು ಹುಡುಕಾಟ ನಡೆಸುತ್ತಿದ್ದರಂತೆ. ತಮ್ಮ ಸ್ನೇಹಿತ ಸುರೇಂದ್ರ ಸಿಂಗ್ ಸಿಂಗ್ ಜೊತೆ ಹನ್ಸಿಗೆ ಬಂದ ಸುಂದರ್ ಪಾಲ್ ಸಂದೀಪ್ ಹಾಗೂ ಪ್ರವೀಣ್ ಎಂಬವರನ್ನ ಭೇಟಿ ಮಾಡಿದ್ದರು. ಇದಾದ ಬಳಿಕ ಸೂರ್ಯನಗರದ ಅಮನ್ರನ್ನ ಭೇಟಿ ಮಾಡಿದ್ದರು.
ಈ ಮೂವರು ಸುಂದರ್ ಪಾಲ್ಗೆ ಯಾವುದೇ ದಾಖಲೆ ಹೊಂದಿರದ ಟ್ರ್ಯಾಕ್ಟರ್ ಒಂದನ್ನ ತೋರಿಸಿದ್ದರು. ಮೊದಲು 3 ಲಕ್ಷದ 70 ಸಾವಿರ ಬೇಕೆಂದು ಮೂವರು ಹೇಳಿದ್ದರು. ಆದರೆ ಸುಂದರ್ ಪಾಲ್ 2.4 ಲಕ್ಷ ರೂಪಾಯಿ ನೀಡಿದ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಉಳಿದ ಹಣವನ್ನ ದಾಖಲೆ ಸಿಕ್ಕ ಬಳಿಕ ನೀಡೋದಾಗಿಯೂ ಹೇಳಿದ್ದರು. ದಾಖಲೆಯನ್ನ ಪಡೆದುಕೊಂಡ ಸುಂದರ್ ಪಾಲ್ ಸಂಪೂರ್ಣ ಹಣ ಪಾವತಿ ಮಾಡಿದ್ದರು.
ಕೆಲ ತಿಂಗಳ ಬಳಿಕ ಸುಂದರ್ ಪಾಲ್ ಈ ಟ್ರ್ಯಾಕ್ಟರ್ನ್ನು ಹಾಪುರ್ ಗ್ರಾಮದ ಒಬ್ಬರಿಗೆ ಮಾರಾಟ ಮಾಡಿದ್ದರು. ಇದಾದ ಕೆಲವು ದಿನಗಳ ಬಳಿಕ ಪೊಲೀಸರು ಸುಂದರ್ ಪಾಲ್ಗೆ ಇದು ಕಳುವು ಮಾಡಿದ ಟ್ರ್ಯಾಕ್ಟರ್ ಎಂದು ಹೇಳಿದ್ದಾರೆ. ಇದೀಗ ಸುಂದರ್ ಪಾಲ್ ಮೂವರ ವಿರುದ್ಧ 3.7 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ದಾಖಲಿಸಿದ್ದಾರೆ.