alex Certify ಮಹಾರಾಷ್ಟ್ರ ನೂತನ ಸಿಎಂ ತದ್ರೂಪಿ ಹರ್ಷ್​ ಗೋಯೆಂಕಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರ ನೂತನ ಸಿಎಂ ತದ್ರೂಪಿ ಹರ್ಷ್​ ಗೋಯೆಂಕಾ…..!

ಕೈಗಾರಿಕೋದ್ಯಮಿ ಹರ್ಷ್​ ಗೋಯಂಕ ತಾವು ಮತ್ತು ಮಹಾರಾಷ್ಟ್ರ ನೂತನ ಸಿಎಂ ಏಕನಾಥ ಶಿಂಧೆ ತದ್ರೂಪಿಯಂತೆ ಇರುವ ಸಂಗತಿಯನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಸಿಎಂ ಫೋಟೋ ಹಾಗೂ ತಮ್ಮ ಕಪ್ಪು- ಬಿಳುಪು ಫೋಟೋವನ್ನು ಹರ್ಷ್​ ಪೋಸ್ಟ್​ ಮಾಡಿದ್ದು, ಟ್ವೀಟರ್​ ಬಳಕೆದಾರರು ಅಚ್ಚರಿ ಹಾಗೂ ಖುಷಿಯಿಂದ ಕಾಮೆಂಟ್​ ಮಾಡಿದ್ದಾರೆ. ಕೆಲವು ಸೆಲಬ್ರಿಟಿಗಳೂ ಸಹ ಆ ಪೋಸ್ಟ್​ಗೆ ಕಾಮೆಂಟ್​ ಮಾಡಿದ್ದಾರೆ.

ನನ್ನನ್ನು ಭೇಟಿಯಾಗಲು ಬರುವವರಿಗೆ ಯಾವುದೇ ಅನಾನುಕೂಲಕ್ಕಾಗಿ ಕ್ಷಮಿಸಿ. ನನ್ನ ಝೆಡ್​ ಪ್ಲಸ್​ ಭದ್ರತೆಯು ತೊಂದರೆಯಾಗಬಹುದೆಂದು ನನಗೆ ತಿಳಿದಿದೆ. ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ. ಜೈ ಮಹಾರಾಷ್ಟ್ರ! ಎಂದು ಹರ್ಷ್​ ಟ್ವೀಟ್​ನಲ್ಲಿ ಹಾಸ್ಯ ಮಾಡಿದ್ದಾರೆ.

ಫೋಟೋವನ್ನು ನೋಡಿ ಕೆಲವರು ಹಿಂದಿನ ಜನ್ಮದಲ್ಲಿ ಇಬ್ಬರೂ ಸಹೋದರರಾಗಿದ್ದಿರಬಹುದು ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹರ್ಷ್​ ಗೋಯೆಂಕಾ ತಮ್ಮ ಟ್ವಿಟ್ಟರ್​ನಲ್ಲಿ ಆಗಾಗ್ಗೆ ರಂಜಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಜೇಶ್​ ಎಂಬವರು ಬರೆದ ಸ್ವಾರಸ್ಯಕರ ರಾಜೀನಾಮೆ ಪತ್ರದ ಸ್ನ್ಯಾಪ್​ ಅನ್ನು ಅವರು ಹಂಚಿಕೊಂಡಿದ್ದರು.

— Harsh Goenka (@hvgoenka) July 3, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...