
ಸಿಎಂ ಫೋಟೋ ಹಾಗೂ ತಮ್ಮ ಕಪ್ಪು- ಬಿಳುಪು ಫೋಟೋವನ್ನು ಹರ್ಷ್ ಪೋಸ್ಟ್ ಮಾಡಿದ್ದು, ಟ್ವೀಟರ್ ಬಳಕೆದಾರರು ಅಚ್ಚರಿ ಹಾಗೂ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಕೆಲವು ಸೆಲಬ್ರಿಟಿಗಳೂ ಸಹ ಆ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.
ನನ್ನನ್ನು ಭೇಟಿಯಾಗಲು ಬರುವವರಿಗೆ ಯಾವುದೇ ಅನಾನುಕೂಲಕ್ಕಾಗಿ ಕ್ಷಮಿಸಿ. ನನ್ನ ಝೆಡ್ ಪ್ಲಸ್ ಭದ್ರತೆಯು ತೊಂದರೆಯಾಗಬಹುದೆಂದು ನನಗೆ ತಿಳಿದಿದೆ. ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ. ಜೈ ಮಹಾರಾಷ್ಟ್ರ! ಎಂದು ಹರ್ಷ್ ಟ್ವೀಟ್ನಲ್ಲಿ ಹಾಸ್ಯ ಮಾಡಿದ್ದಾರೆ.
ಫೋಟೋವನ್ನು ನೋಡಿ ಕೆಲವರು ಹಿಂದಿನ ಜನ್ಮದಲ್ಲಿ ಇಬ್ಬರೂ ಸಹೋದರರಾಗಿದ್ದಿರಬಹುದು ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹರ್ಷ್ ಗೋಯೆಂಕಾ ತಮ್ಮ ಟ್ವಿಟ್ಟರ್ನಲ್ಲಿ ಆಗಾಗ್ಗೆ ರಂಜಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಜೇಶ್ ಎಂಬವರು ಬರೆದ ಸ್ವಾರಸ್ಯಕರ ರಾಜೀನಾಮೆ ಪತ್ರದ ಸ್ನ್ಯಾಪ್ ಅನ್ನು ಅವರು ಹಂಚಿಕೊಂಡಿದ್ದರು.