alex Certify ಗಣಿತ ಮೇಸ್ಟ್ರು ಬೇಕಾಗಿದ್ದಾರೆ; ಸಮೀಕರಣ ಬಿಡಿಸಿದರೆ ಮಾತ್ರ ಕೆಲಸ- ಕುತೂಹಲದ ಜಾಹೀರಾತು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಿತ ಮೇಸ್ಟ್ರು ಬೇಕಾಗಿದ್ದಾರೆ; ಸಮೀಕರಣ ಬಿಡಿಸಿದರೆ ಮಾತ್ರ ಕೆಲಸ- ಕುತೂಹಲದ ಜಾಹೀರಾತು ವೈರಲ್

ಅಹಮದಾಬಾದ್​: ಉದ್ಯೋಗದಾತರು ತಮ್ಮ ಉದ್ಯೋಗ ಜಾಹೀರಾತುಗಳೊಂದಿಗೆ ಸೃಜನಶೀಲರಾಗಿರುತ್ತಾರೆ. ಇದೀಗ ಗುಜರಾತ್‌ನ ಶಾಲೆಯೊಂದು ಗಣಿತ ಶಿಕ್ಷಕರನ್ನು ನೇಮಿಸಿಕೊಳ್ಳುವ ಸಲುವಾಗಿ ವಿಶಿಷ್ಟ ಜಾಹೀರಾತನ್ನು ನೀಡಿದ್ದು ಅದೀಗ ವೈರಲ್​ ಆಗಿದೆ.

ಆಸಕ್ತಿದಾಯಕ ಜಾಹೀರಾತು ಎಷ್ಟು ಅದ್ಭುತವಾಗಿದೆ ಎಂದರೆ ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ಕರೆ ಮಾಡಲು ಯಾವುದೇ ಸಂಖ್ಯೆಯನ್ನು ಒಳಗೊಂಡಿಲ್ಲ. ಬದಲಿಗೆ ಸಂಪರ್ಕ ಸಂಖ್ಯೆಯ ಬದಲಿಗೆ ಸಮೀಕರಣವನ್ನು ಬಳಸಲಾಗಿದೆ, ಆದ್ದರಿಂದ ಅರ್ಜಿ ಸಲ್ಲಿಸಲು ಬಯಸುವ ಯಾರಾದರೂ ಮೊದಲು ಗಣಿತದ ಸಮಸ್ಯೆಯನ್ನು ಪರಿಹರಿಸಬೇಕು. ಈ ಸಮಸ್ಯೆ ಪರಿಹರಿಸಿ ಸಂಪರ್ಕ ಸಂಖ್ಯೆ ಕಂಡುಹಿಡಿದರೆ ಮಾತ್ರ ಮುಂದಿನ ಸ್ಟೆಪ್​ಗೆ ಅರ್ಹರು‌ !

ಗಣಿತ ಶಿಕ್ಷಕರನ್ನು ನೇಮಿಸಿಕೊಳ್ಳುವ ವಿಶಿಷ್ಟ ತಂತ್ರದಿಂದ ಇಂಟರ್ನೆಟ್ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಹಲವಾರು ಬಳಕೆದಾರರು ಸಮೀಕರಣವನ್ನು ಸಹ ಪರಿಹರಿಸಿದ್ದಾರೆ. ಕ್ಯಾಲ್ಕುಲೇಟರ್ ಇಲ್ಲದೇ ಇದನ್ನು ಬಗೆಹರಿಸಬೇಕಿದೆ. ನೀವೂ ಬೇಕಿದ್ದರೆ ಒಮ್ಮೆ ಟ್ರೈ ಮಾಡಿ.

ಅಷ್ಟಕ್ಕೂ ಉತ್ತರವು ‘9428163811’ ಆಗಿದ್ದು ಅದನ್ನು ಪೋಸ್ಟ್​ನಲ್ಲಿಯೇ ವಿವರಿಸಲಾಗಿದೆ. ಹರ್ಷ್​ ಅವರು ಇದನ್ನು ಪರಿಹರಿಸಿದ್ದಾರೆ. ಯಾವುದೇ ಸಹಾಯವಿಲ್ಲದೇ ನಾನು ಇದನ್ನು ಕಂಡುಹಿಡಿದಿದ್ದೇನೆ ಎಂದಿದ್ದಾರೆ.

ಬೆರಳೆಣಿಕೆ ಬಳಕೆದಾರರು ಕೂಡ ಇದನ್ನು ಬಿಡಿಸಿದ್ದು, ದಯವಿಟ್ಟು ನನಗೆ ಪ್ರಶಸ್ತಿ ನೀಡಿ ಸರ್ ಎಂದು ಬರೆದಿದ್ದಾರೆ. ಇನ್ನೊಬ್ಬರು ನಮಗೆ ಕಲಿಸಿದ ಗಣಿತ ಮೇಸ್ಟ್ರು ಸರಿಯಿರಲಿಲ್ಲ. ನಮಗಿದು ಅರ್ಥ ಆಗುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...