ಉದ್ಯಮಿ ಹರ್ಷ್ ಗೋಯೆಂಕಾ ಅವರು “ಓ ಮೇರೆ ದಿಲ್ ಕೆ ಚೆೈನ್’ ಹಾಡಿನ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಹಾಡಿರುವ ವ್ಯಕ್ತಿಯ ಉತ್ಸಾಹ, ಹಾಡಿರುವ ಭಂಗಿ ಎಲ್ಲವೂ ಮಜಾ ಕೊಡುತ್ತದೆ.
ಬೊಕ್ಕ ತಲೆಯ ವ್ಯಕ್ತಿಯೊಬ್ಬರು ಬಾಯಲ್ಲಿ ಪಾನ್ ಹಾಕಿಕೊಂಡು ಕರೋಕೆಗೆ ತಕ್ಕಂತೆ ಹಾಡಿದ್ದು, ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿರುವುದು ನಿಖರವಾಗಿ ಹಾಡಿರುವುದಕ್ಕಾಗಿ ಅಲ್ಲ ಅಥವಾ ಭಾವರ್ಪೂಣವಾಗಿರುವುದಕ್ಕಾಗಿ ಅಲ್ಲ, ಹಾಡಿದಾತನ ಅಪಶ್ರುತಿ ಟ್ಯೂನ್ಗಳಿಗಾಗಿ.
ಎವರ್ ಗ್ರೀನ್ ಸಿಂಗರ್ ಕಿಶೋರ್ ಕುಮಾರ್ ಅವರ ಹಾಡನ್ನು ಈ ವ್ಯಕ್ತಿ ರಂಜನೀಯವಾಗಿ ಹಾಡಿದ್ದು ಹರ್ಷ್ ಗೋಯೆಂಕಾಗೆ ವಿಶೇಷವೆನಿಸಿ ಶೇರ್ ಮಾಡಿಕೊಂಡಿದ್ದಾರೆ.
ಕೆಲವರಿಗೆ ಅಸಮಂಜಸವಾಗಿ ಹಾಡಿರುವುದನ್ನು ಕೇಳಿ ಅಸಹನೀಯ ಎನಿಸಲೂ ಬಹುದು.