alex Certify ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಹ್ಯಾರಿ ಪಾಟರ್ ಪುಸ್ತಕ: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಹ್ಯಾರಿ ಪಾಟರ್ ಪುಸ್ತಕ: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

$ 471,000 ಕ್ಕೆ ಮಾರಾಟವಾದ ಹ್ಯಾರಿ ಪಾಟರ್ ಪುಸ್ತಕವು 20 ನೇ ಶತಮಾನದ ಅತ್ಯಂತ ದುಬಾರಿ ಕಾಲ್ಪನಿಕ ಕೃತಿಯಾಗಿದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಹ್ಯಾರಿ ಪಾಟರ್ ನ ಮೊದಲ ಆವೃತ್ತಿಯು ಗುರುವಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ $471,000 (3,56,62,942.50 ರೂ.) ಕ್ಕೆ ಮಾರಾಟವಾಗಿದೆ. 20ನೇ ಶತಮಾನದ ಕಾಲ್ಪನಿಕ ಕೃತಿ ಮಾರಾಟ ಬೆಲೆಯು ವಿಶ್ವ ದಾಖಲೆಗೆ ಪಾತ್ರವಾಗಿದೆ ಎಂದು ಹರಾಜುದಾರರು ತಿಳಿಸಿದ್ದಾರೆ.

ಪುಸ್ತಕವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹ್ಯಾರಿ ಪಾಟರ್ ಅಂಡ್ ದಿ ಸೋರ್ಸೆರರ್ಸ್ ಸ್ಟೋನ್ ಎಂದು ಪ್ರಕಟಿಸಲಾಗಿದೆ. ನಿರ್ದಿಷ್ಟ ಬೈಂಡಿಂಗ್‌ನೊಂದಿಗೆ ಕೇವಲ 500 ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿತ್ತು ಎಂದು ಡಲ್ಲಾಸ್ ಮೂಲದ ಹರಾಜು ಸಂಗ್ರಾಹಕರು ತಿಳಿಸಿದ್ದಾರೆ.

ಹ್ಯಾರಿ ಪಾಟರ್ ಮೊದಲ ಆವೃತ್ತಿಗಳ ಹಿಂದಿನ ಹರಾಜು ಬೆಲೆಗಳು ಸುಮಾರು $110,000 ರಿಂದ $138,000 ವರೆಗೆ ಇದ್ದವು. ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಹ್ಯಾರಿ ಪಾಟರ್ ಪುಸ್ತಕ ಮಾತ್ರವಾಗಿಲ್ಲ. ಇದು ವಾಣಿಜ್ಯವಾಗಿ ಪ್ರಕಟವಾದ 20ನೇ ಶತಮಾನದ ಕಾಲ್ಪನಿಕ ಕೃತಿಗಳ ಅತ್ಯಂತ ದುಬಾರಿ ಮಾರಾಟವಾಗಿದೆ ಎಂದು ಹೆರಿಟೇಜ್ ಹರಾಜು ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೋ ಮದ್ದಲೆನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪುಸ್ತಕವನ್ನು ಅಮೆರಿಕಾದ ಸಂಗ್ರಾಹಕರು ಮಾರಾಟ ಮಾಡಿದ್ದಾರೆ. ಆದರೆ ಯಾರು ಖರೀದಿ ಮಾಡಿದ್ದಾರೆ ಎಂಬ ಹೆಸರನ್ನು ಮಾತ್ರ ತಿಳಿಸಿಲ್ಲ.

ಬ್ರಿಟಿಷ್ ಲೇಖಕ ಜೆ.ಕೆ. ಯುಎಸ್ ಪ್ರಕಾಶಕ ಸ್ಕೊಲಾಸ್ಟಿಕ್ ಪ್ರಕಾರ,  ರೌಲಿಂಗ್ ಅವರು ಮಾಂತ್ರಿಕ ಹುಡುಗನ ಸಾಹಸಗಳ ಬಗ್ಗೆ ಇನ್ನೂ ಆರು ಪುಸ್ತಕಗಳನ್ನು ಬರೆದಿದ್ದ,  ಅದು ಪ್ರಪಂಚದಾದ್ಯಂತ 80 ಭಾಷೆಗಳಲ್ಲಿ ಸುಮಾರು 500 ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆ. ಪುಸ್ತಕ ಆಧರಿಸಿ ಸಿನಿಮಾಗಳನ್ನು ಕೂಡ  ಮಾಡಲಾಗಿದ್ದು, ಇದು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ $7.8 ಬಿಲಿಯನ್ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...