alex Certify ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್‌ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್‌ ಪತ್ನಿ

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಹಾಗೂ ಅವರ ಮಡದಿ ಗೀತಾ ಬಸ್ರಾಗೆ ಎರಡನೇ ಮಗು ಜನಿಸಿದೆ.

ಗಂಡು ಮಗುವಿನ ಆಗಮನದ ಸಂತಸದಲ್ಲಿರುವ ಭಜ್ಜಿ ದಂಪತಿಗೆ, 2016ರ ಜುಲೈನಲ್ಲಿ ಮೊದಲ ಮಗು, ಹಿನ್ಯಾ ಪೀರ್‌ ಪ್ಲಹಾ ಜನಿಸಿದ್ದಳು.

“ನಮ್ಮ ಕೈ ಹಿಡಿಯಲು ಹೊಸದೊಂದು ಪುಟ್ಟ ಕೈ ಬಂದಿದೆ. ಆತನ ಪ್ರೀತಿ ಚಿನ್ನದಂತೆ ಅಮೂಲ್ಯವಾದದ್ದು” ಎಂದು ಹರ್ಭಜನ್ ಟ್ವೀಟ್‌ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.

Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ

“ನಮ್ಮ ಹೃದಯಗಳು ತುಂಬಿವೆ, ಜೀವನಗಳು ಪರಿಪೂರ್ಣ ಎನಿಸುತ್ತಿದೆ. ನಮಗೊಂದು ಆರೋಗ್ಯಪೂರ್ಣ ಗಂಡು ಮಗುವನ್ನು ಕೊಟ್ಟ ದೇವರಿಗೆ ಧನ್ಯವಾದ ತಿಳಿಸುತ್ತೇವೆ. ಗೀತಾ ಹಾಗೂ ಮಗು ಇಬ್ಬರೂ ಚೆನ್ನಾಗಿದ್ದಾರೆ. ನಾವೀಗ ಸಂತಸದಲ್ಲಿ ಮುಳುಗಿದ್ದು, ನಿರಂತರ ಹಾರೈಕೆಗಳೊಂದಿಗೆ ನಮ್ಮನ್ನು ಬೆಂಬಲಿಸುತ್ತಿರುವ ನಮ್ಮೆಲ್ಲಾ ಹಿತೈಷಿಗಳಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ” ಎಂದು ಭಜ್ಜಿ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...