ಗುಜರಾತ್ನ ಯುವಕನೊಬ್ಬ ತನ್ನ 71.60 ಲಕ್ಷ ರೂಪಾಯಿ ಮೌಲ್ಯದ ಜಾಗ್ವಾರ್ ಎಕ್ಸ್ಎಫ್ನ ಹೊರಭಾಗವನ್ನು ಭಾರತದ ಧ್ವಜದಂತೆ ಕಾಣುವಂತೆ ತ್ರಿವರ್ಣದಲ್ಲಿ ಅಲಂಕರಿಸಿದ್ದಾನೆ.
ಸಿದ್ಧಾರ್ಥ್ ಜೋಷಿ ಎಂಬಾತ ತನ್ನ ಕಾರಿನ ನೋಟವನ್ನು ಮಾರ್ಪಾಡು ಮಾಡಲು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂಬುದು ಗಮನಿಸಬೇಕಾದ ಸಂಗತಿ. ವರದಿಗಳ ಆಧಾರದ ಮೇಲೆ ʼಹರ್ ಘರ್ ತಿರಂಗಾʼ ಅಭಿಯಾನವನ್ನು ಬೆಂಬಲಿಸಲು ತನ್ನ ಐಷಾರಾಮಿ ಸೆಡಾನ್ನಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಭಾರತದ ಧ್ವಜವನ್ನು ಮನೆ ಮನೆಯಲ್ಲಿ ಹಾರಿಸಲು ʼಆಜಾದಿ ಕಾ ಅಮೃತ್ ಮಹೋತ್ಸವʼದಲ್ಲಿ ಪ್ರಚಾರ ಮಾಡಿದ್ದು, ಇದರಿಂದ ಪ್ರೇರಿತನಾದ ಯುವಕ ಈ ರೀತಿ ಮಾಡಿದ್ದಾನೆ.
ಇದಲ್ಲದೆ, ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಗುಜರಾತ್ನ ಸೂರತ್ನಿಂದ ದೆಹಲಿಗೆ ಕಾರಿನಲ್ಲಿ ಹೋಗಿಬಂದಿದ್ದಾಗಿಯೂ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಪ್ರಯತ್ನ ನಡೆಸಿದ್ದಾನೆ.
ಆತ ಹೊಂದಿರುವ ಜಾಗ್ವಾರ್ ಎಕ್ಸ್ಎಫ್ನ ಮುಂಭಾಗದ ಬಾನೆಟ್ ಮತ್ತು ಸೈಡ್ ಪ್ಯಾನೆಲ್ ಕೇಸರಿ ಬಣ್ಣ ಆವರಿಸಿದೆ. ಅದರ ನಂತರ ಬದಿಗಳಲ್ಲಿ ಬಿಳಿ ಮತ್ತು ಕಾರಿನ ಹಿಂಭಾಗದ ತುದಿಯಲ್ಲಿ ಹಸಿರು ಇದೆ.