alex Certify ಗಾಳಿ ಮಟ್ಟದಲ್ಲಿ ಸುಧಾರಣೆ; ಶುಭ್ರ ಆಗಸದ ಚಿತ್ರ ಹಂಚಿಕೊಂಡು ಸಂಭ್ರಮಿಸಿದ ಮುಂಬೈ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಿ ಮಟ್ಟದಲ್ಲಿ ಸುಧಾರಣೆ; ಶುಭ್ರ ಆಗಸದ ಚಿತ್ರ ಹಂಚಿಕೊಂಡು ಸಂಭ್ರಮಿಸಿದ ಮುಂಬೈ ಜನ

ಗುರುವಾರ ಬೆಳಿಗ್ಗೆ ಶುಭ್ರ ಆಗಸ ಹಾಗೂ ಶುದ್ಧ ಗಾಳಿಯನ್ನು ಅನುಭವಿಸಿದ ಮುಂಬೈ ಜನತೆಗೆ ಬಹಳ ದಿನಗಳ ಬಳಿಕ ಗಾಳಿಯ ಗುಣಮಟ್ಟದಲ್ಲಿ ಆದ ಬದಲಾವಣೆಯಿಂದ ಭಾರೀ ಸಂತಸವಾಗಿದೆ. ಮಾಲಿನ್ಯದ ಮಟ್ಟಗಳು ಕಡಿಮೆಯಾದ ಘಳಿಗೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಮುಂಬೈ ಮಂದಿ.

“ಅಪರೂಪಕ್ಕೆ ಮೂಡಿ ಬಂದ ಸ್ವಚ್ಛ ದಿನದಂದು ನೀವು ವರ್ಲಿಯಲ್ಲಿ ನಿಂತು ವರ್ಸೋವಾವನ್ನು ಕಾಣಬಹುದಾಗಿದೆ. ಕಳೆದ ಕೆಲ ವರ್ಷಗಳಿಂದ ಧೂಮ ತುಂಬಿಕೊಂಡಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ,” ಎಂದು ಮುಂಬೈ ವೆದರ್‌ ಹೆಸರಿನ ಹ್ಯಾಂಡಲ್‌ ಒಂದು ಸುಂದರ ಚಿತ್ರದೊಂದಿಗೆ ಟ್ವೀಟ್ ಮಾಡಿದೆ.

ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಟ್ವಿಟ್ಟಿಗರೊಬ್ಬರು, “ಮೂರು ವರ್ಷಗಳ ಹಿಂದೆ ಲಾಕ್‌ಡೌನ್ ಕಾರಣದಿಂದ ಮಾಲಿನ್ಯ ತಗ್ಗಿದ ಪರಿಣಾಮ ಇಂತ ಶುಭ್ರ ದಿನಗಳನ್ನು ಅನುಭವಿಸಿದ್ದೆವು. ಮೂರು ವರ್ಷಗಳ ಬಳಿಕ ಅಂಥದ್ದೇ ದಿನವೊಂದು ಬಂದಿದೆ. ಕಾಕತಾಳಿಯವಾಗಿ,” ಎಂದು ಹೇಳಿಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಗರದ ತಾಪಮಾನ 25.4 ಡಿಗ್ರೀ ಸೆಲ್ಸಿಯಸ್‌ ಇದ್ದು, 77% ಆರ್ದ್ರತೆ ದಾಖಲಾಗಿದೆ. ಅಕಾಲಿಕ ಮಳೆಯಿಂದಾಗಿ ನಗರದ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಸುಧಾರಿಸಿದ್ದು, ಸಾಫ್ರಾರ್‌‌ ವರದಿಯಂತೆ ಶುಕ್ರವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಮುಂಬಯಿಯ ಎಕ್ಯೂಐ 60 ಇದ್ದು , ’ಸಮಾಧಾನಕರ’ ವರ್ಗದಲ್ಲಿ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...