alex Certify ಧೋನಿಗೆ ದಿನೇಶ್​ ಕಾರ್ತಿಕ್ ವಿಶಿಷ್ಟ ರೀತಿಯಲ್ಲಿ ಜನ್ಮದಿನದ ಹಾರೈಕೆ, ಅಂತದ್ದೇನು ಸ್ಪೆಷಲ್​ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಗೆ ದಿನೇಶ್​ ಕಾರ್ತಿಕ್ ವಿಶಿಷ್ಟ ರೀತಿಯಲ್ಲಿ ಜನ್ಮದಿನದ ಹಾರೈಕೆ, ಅಂತದ್ದೇನು ಸ್ಪೆಷಲ್​ ಗೊತ್ತಾ ?

ಭಾರತ ಕ್ರಿಕೆಟ್​ನ ಧ್ರುವತಾರೆ ಮಹೇಂದ್ರ ಸಿಂಗ್​ ಧೋನಿ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿ ಗಮನ ಸೆಳೆದಿದ್ದಾರೆ.

ವಿರಾಟ್​ ಕೊಹ್ಲಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಎಂಎಸ್​ಡಿಗೆ ಅನೇಕರ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿವೆ. ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಧೋನಿ ಮತ್ತು ಅವರ ಚಿತ್ರಗಳ ಕೊಲಾಜ್​ ಅನ್ನು ಪೋಸ್ಟ್​ ಮಾಡಿದ್ದಾರೆ. ನೀವು ಭಾರತೀಯ ಕ್ರಿಕೆಟ್​ಗಾಗಿ ಮಾಡಿದ ಎಲ್ಲದಕ್ಕೂ ಧನ್ಯವಾದಗಳು. ನೀವು ನನಗೆ ಹಿರಿಯ ಸಹೋದರನಂತೆ ಇದ್ದೀರಿ ಎಂಬ ಸಾಲು ಗಮನ ಸೆಳೆಯುತ್ತಿವೆ.

BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ

ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್​ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹುಟ್ಟುಹಬ್ಬದ ಸಂಭ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಧೋನಿ ಒಂದೇ ಬಾರಿಗೆ ಹಲವು ಕೇಕ್​ ಕತ್ತರಿಸುತ್ತಿರುವುದನ್ನು ನೋಡಬಹುದು.

ಕ್ರಿಕೆಟಿಗ ಕಾರ್ತಿಕ್​ ತಮ್ಮ ಮಾಜಿ ನಾಯಕನಿಗೆ ವಿಶೇಷ ಪೋಸ್ಟ್​ ಅರ್ಪಿಸಿ ಹಾರೈಸಿದ್ದಾರೆ. ಧೋನಿ ನಾಯಕತ್ವದಲ್ಲಿ ಗೆದ್ದಿರುವ ಎಲ್ಲಾ ಐಪಿಎಲ್​ ಟ್ರೋಫಿಗಳೊಂದಿಗೆ ಕ್ಯಾಪ್ಟನ್​ ಕೂಲ್​ ಅದನ್ನು ನೋಡುತ್ತಿರುವ ಸ್ಕೆಚ್​ ಪೋಸ್ಟ್​ ಮಾಡಿದ್ದಾರೆ. ಜೊತೆಗೆ “ಹ್ಯಾಪಿ ಬರ್ತ್ ಡೇ ಡೇ ಲೆಜೆಂಡ್​. ಎಂಎಸ್​ ಧೋನಿ ಎಲ್ಲರಿಗೂ ನೀವು ಐಡಲ್ ​! ನಿಮಗೆ ಜನ್ಮದಿನದ ಶುಭಾಶಯಗಳು” ಎಂದು ಹಾರೈಸಿದ್ದಾರೆ. ಅವರ ಹಾರೈಕೆ ಪೋಸ್ಟ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...