
ಭಾರತ ಕ್ರಿಕೆಟ್ನ ಧ್ರುವತಾರೆ ಮಹೇಂದ್ರ ಸಿಂಗ್ ಧೋನಿ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿ ಗಮನ ಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಎಂಎಸ್ಡಿಗೆ ಅನೇಕರ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿವೆ. ಕೊಹ್ಲಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಧೋನಿ ಮತ್ತು ಅವರ ಚಿತ್ರಗಳ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ. ನೀವು ಭಾರತೀಯ ಕ್ರಿಕೆಟ್ಗಾಗಿ ಮಾಡಿದ ಎಲ್ಲದಕ್ಕೂ ಧನ್ಯವಾದಗಳು. ನೀವು ನನಗೆ ಹಿರಿಯ ಸಹೋದರನಂತೆ ಇದ್ದೀರಿ ಎಂಬ ಸಾಲು ಗಮನ ಸೆಳೆಯುತ್ತಿವೆ.
BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ
ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹುಟ್ಟುಹಬ್ಬದ ಸಂಭ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಧೋನಿ ಒಂದೇ ಬಾರಿಗೆ ಹಲವು ಕೇಕ್ ಕತ್ತರಿಸುತ್ತಿರುವುದನ್ನು ನೋಡಬಹುದು.
ಕ್ರಿಕೆಟಿಗ ಕಾರ್ತಿಕ್ ತಮ್ಮ ಮಾಜಿ ನಾಯಕನಿಗೆ ವಿಶೇಷ ಪೋಸ್ಟ್ ಅರ್ಪಿಸಿ ಹಾರೈಸಿದ್ದಾರೆ. ಧೋನಿ ನಾಯಕತ್ವದಲ್ಲಿ ಗೆದ್ದಿರುವ ಎಲ್ಲಾ ಐಪಿಎಲ್ ಟ್ರೋಫಿಗಳೊಂದಿಗೆ ಕ್ಯಾಪ್ಟನ್ ಕೂಲ್ ಅದನ್ನು ನೋಡುತ್ತಿರುವ ಸ್ಕೆಚ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ಹ್ಯಾಪಿ ಬರ್ತ್ ಡೇ ಡೇ ಲೆಜೆಂಡ್. ಎಂಎಸ್ ಧೋನಿ ಎಲ್ಲರಿಗೂ ನೀವು ಐಡಲ್ ! ನಿಮಗೆ ಜನ್ಮದಿನದ ಶುಭಾಶಯಗಳು” ಎಂದು ಹಾರೈಸಿದ್ದಾರೆ. ಅವರ ಹಾರೈಕೆ ಪೋಸ್ಟ್ ವೈರಲ್ ಆಗಿದೆ.