alex Certify ಇಂದಿನಿಂದ ʻಅಂಜನಾದ್ರಿʼಯಲ್ಲಿ ಅದ್ಧೂರಿ ʻಹನುಮಮಾಲಾ ವಿಸರ್ಜನೆʼ ಕಾರ್ಯಕ್ರಮ : ಭಕ್ತಾದಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ʻಅಂಜನಾದ್ರಿʼಯಲ್ಲಿ ಅದ್ಧೂರಿ ʻಹನುಮಮಾಲಾ ವಿಸರ್ಜನೆʼ ಕಾರ್ಯಕ್ರಮ : ಭಕ್ತಾದಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊಪ್ಪಳ : ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಿಂದೆಂದಿಗಿಂತಲೂ ಈ ಭಾರಿ ಹೆಚ್ಚಿನ ರೀತಿಯಲ್ಲಿ ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ ಕಾಣಬೇಕು. ಜನರಿಗೆ ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಲಂಕಾರ ಸಮಿತಿಯನ್ನು ರಚಿಸಿ ಬೆಟ್ಟದ ಅಲಂಕಾರಕ್ಕು ಸಹ ಅಷ್ಟೇ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮೇಲಿಂದ ಮೇಲೆ ನಿರ್ದೇಶನ ನೀಡಿ ಮಾರ್ಗದರ್ಶನ ಮಾಡಿದ್ದರು.

ಹನುಮಮಾಲಾ ಕಾರ್ಯಕ್ರಮದ ಮುನ್ನಾ ದಿನವಾದ ಡಿಸೆಂಬರ್ 22ರಂದು ಅಂಜನಾದ್ರಿಯ ಬೆಟ್ಟವು ಬಗೆಬಗೆಯ ಬಣ್ಣದ ವಿದ್ಯೂದೀಪಗಳಿಂದ ಅಲಂಕಾರಗೊಂಡು ಜನಮನ ಸೆಳೆಯುತ್ತಿದೆ.

ಅಲಂಕಾರಕ್ಕೆ ಮೆಚ್ಚುಗೆ: ಡಿಸೆಂಬರ್ 22ರಂದು ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುದೀಪಗಳಿಂದ ಅಲಂಕೃತಗೊಂಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಹನುಮಮಾಲಾ ಕಾರ್ಯಕ್ರಮ: ವಾಹನಗಳಿಗೆ ಪಾರ್ಕಿಂಗ್ ಮಾಡಲು ಗುರುತಿಸಿದ ಸ್ಥಳಗಳು

ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಡೆಬಾಗಿಲು, ಆನೆಗುಂದಿ ಕಡೆಯಿಂದ ಬರುವ ವಾಹನಗಳಿಗೆ ಹಾಗೂ ಶಿವಪುರ ಕಡೆಯಿಂದ ಬರುವ ವಾಹನಗಳಿಗೆ ಈ ಕೆಳಕಂಡಂತೆ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಡೆಬಾಗಿಲು, ಆನೆಗುಂದಿ ಕಡೆಯಿಂದ ಬರುವ ವಾಹನಗಳಿಗೆ ಈ ಮುಂದಿನಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆನೆಗುಂದಿ ಪೆಟ್ರೋಲ್ ಬಂಕ್ ಹತ್ತಿರ ಕ್ರೂಷರ್ ಕಾರ್‌ಗಳಿಗೆ, ಆನೆಗುಂದಿ ಉತ್ಸವದ ಸ್ಥಳದ ಹತ್ತಿರ ಬಸ್ ಮತ್ತು ಮಿನಿ ಬಸ್‌ಗಳಿಗೆ, ಡಿ.ಪಿ. ಕ್ರಾಸ್ ಹಿಂದೆ ಮತ್ತು ತಳವಾರಘಟ್ಟ ರಸ್ತೆ ಹತ್ತಿರ ಕ್ರೂಷರ್ ಕಾರ್‌ಗಳಿಗೆ, ಡಿ.ಪಿ. ಕ್ರಾಸ್ ದುರ್ಗಾಬೆಟ್ಟ ರಸ್ತೆಯ ಮಂಟಪದ ಮುಂದೆ ಕ್ರೂಷರ್ ಕಾರ್‌ಗಳಿಗೆ, ಡಿ.ಪಿ. ಕ್ರಾಸ್ ದುರ್ಗಾಬೆಟ್ಟ ರಸ್ತೆಯ ಮಂಟಪದ ಹತ್ತಿರದ ರೆಸ್ಟೋರೆಂಟ್ ಹಿಂದೆ ಕ್ರಷರ್ ಕಾರ್‌ಗಳಿಗೆ, ಪಂಪಾಸರೋವರ ಕ್ರಾಸ್ ಹತ್ತಿರದ ರಸ್ತೆಯ ಇಲ್ಲೂರ ರಾಮಕೃಷ್ಣ ಅವರ ಹೊಲದಲ್ಲಿ ಕ್ರಷರ್ ಕಾರ್‌ಗಳಿಗೆ, ಬೈಕ್ ರೈಡ್ ಸ್ಥಳದಲ್ಲಿ ದ್ವಿಚಕ್ರ ವಾಹನಗಳಿಗೆ, ಗೋವಿಂದಪ್ಪನ ಹೊಲದಲ್ಲಿ ವಿಐಪಿ ಕಾರ್‌ಗಳಿಗೆ ಮತ್ತು ಬೈಕ್‌ಗಳಿಗೆ, ಅಂಜನಾದ್ರಿ ಬೆಟ್ಟದ ಮುಂದಿರುವ ಒ.ಪಿ ಹತ್ತಿರ ಸರಕಾರಿ ವಾಹನ ಮತ್ತು ವಿವಿಐಪಿ ಕಾರ್‌ಗಳಿಗೆ ಹಾಗೂ ಪುನೀತ ವೃತ್ತದ ಹತ್ತಿರ ಕ್ರೂಷರ್ ಕಾರ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಶಿವಪುರ ಕಡೆಯಿಂದ ಬರುವ ವಾಹನಗಳಿಗೆ ಈ ಮುಂದಿನಂತೆ ವ್ಯವಸ್ಥೆ ಮಾಡಲಾಗಿದೆ. ಕ್ರೂಷರ್ ಮತ್ತು ಕಾರುಗಳಿಗೆ ಸರಕಾರಿ ಜಾಗೆ ಶಿವುನ ಗದ್ದೆಯ ಹತ್ತಿರ ಹಾಗು ಆಂಜನಪ್ಪರವರ ಹೊಲದ ಹತ್ತಿರದಲ್ಲಿ ಮತ್ತು ಹನುಮನಹಳ್ಳಿ ನಂತರ ರಾಮರೆಡ್ಡಿ ಹೊಲದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬೈಕ್ ಪಾರ್ಕಿಂಗ್ ಮಾಡಲು ಗ್ರೀನ್ ಸ್ಟೋನ್ ರೇರ್ಸಾಟ್ ನ ಹಿಂದೆ ಪಾರ್ಕಿಂಗ್ ಮಾಡಲಾಗಿದೆ.

ಹನುಮಮಾಲಾ ಕಾರ್ಯಕ್ರಮ; ಸಹಾಯವಾಣಿ ಕೇಂದ್ರಗಳ ಸ್ಥಾಪನೆ

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 23 ಮತ್ತು 24 ರಂದು ನಡೆಯುವ ಹನುಮಮಾಲ ಕಾರ್ಯಕ್ರಮಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲು ವಿವಿಧ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

ಗಂಗಾವತಿ ರೈಲ್ವೆ ನಿಲ್ದಾಣದ ಸಹಾಯವಾಣಿ ಕೇಂದ್ರದಲ್ಲಿ ಬೆಳಿಗ್ಗೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ರಾಜಕುಮಾರ ಸಿಆರ್‌ಪಿ ನವಲಿ- 9880802091, ವಿನಾಯ್ಕ, ಸಿಆರ್‌ಪಿ ಮುಸಲಾಪುರ-9901932836, ವಿಠಪ್ಪ ಸೂಗಿ, ದೈ.ಶಿ. ಜಿ.ಹೆಸ್.ಎಸ್. ಗಂಗಾವತಿ-9964279957, ಭೀಮನಗೌಡ, ದೈ.ಶಿ. ಜಿ.ಹೆಚ್.ಎಸ್. ಬಸಾಪಟ್ಟಣ-9945504919, ತಿಪ್ಪಣ್ಣ, ದೈ.ಶಿ. ಜಿ.ಹೆಚ್.ಎಸ್. ಹಿರೇಖೇಡಾ-9008867656, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಧ್ಯಾಹ್ನ 02 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದುರುಗಪ್ಪ ಸಿ.ಆರ್.ಪಿ. ವೆಂಕಟಗಿರಿ-9538232660, ಸುರೇಶ, ಜಿಎಸ್. ಸಿಆರ್.ಪಿ ಮರಳಿ-9611170560, ಹುಸೇನಪ್ಪ, ದೈ.ಶಿ., ಜಿ.ಹೆಚ್.ಎಸ್.ಆರಾಳ-9945161545, ಭೀಮಪ್ಪ ಕೋಳೂರು, ದೈ.ಶಿ. ಜಿ.ಹೆಚ್.ಎಸ್, ಇಸ್ಲಾಂಪುರ-9448401412, ಶ್ರೀಧರ, ದೈ.ಶಿ. ಜಿ.ಹೆಚ್.ಎಸ್ ಮುಸ್ಟೂರು-9972643181, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ಮಂಜುನಾಥ ಸಿಆರ್.ಪಿ ಬೂದಗುಂಪಾ-7676210774, ಬಸವನಗೌಡ ಸಿ.ಆರ್.ಪಿ ಶ್ರೀರಾಮನಗರ-9964010040, ಬಸವರಾಜ, ದೈ.ಶಿ. ಜಿ.ಹೆಚ್.ಎಸ್. ವೆಂಕಟಗಿರಿ-9901101803, ಶಂಕರ ದೈ.ಶಿ. ಜಿ.ಹೆಚ್.ಎಸ್ ಕನಕಗಿರಿ-7259444208, ಕರಿಯಪ್ಪ, ದೈ.ಶಿ, ಜಿ.ಹೆಚ್.ಎಸ್ ಗುಂಡೂರು-9740644642, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಂಗಾವತಿ ಬಸ್ ನಿಲ್ದಾಣದ ಸಹಾಯವಾಣಿ ಕೇಂದ್ರದಲ್ಲಿ ಬೆಳಿಗ್ಗೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಕೊಟ್ರೇಶ, ಸಿಆರ್.ಪಿ ಚಿಕ್ಕಡಂಕನಕಲ್-9036808742, ಕರಿಯಪ್ಪ, ದೈ.ಶಿ. ಜಿ.ಹೆಚ್.ಎಸ್. ಗುಂಡೂರ-9740644642, ಪಿ.ರಾಜು, ದೈ.ಶಿ. ಮಹಾಂತಗೌಡ ಪ್ರೌಢ ಶಾಲೆ-98850881088, ಚಂದ್ರಶೇಖರ ದೈ.ಶಿ. ಜಿ.ಹೆಚ್.ಪಿ.ಎಸ್ ವಡ್ಡರಹಟ್ಟಿಕ್ಯಾಂಪ-948147963480, ಹುಸೇನಸಾಬ, ದೈ.ಶಿ. ಸಿ.ಪಿ.ಎಸ್ ಕೇಂದ್ರ ಶಾಲೆ ಗಂಗಾವತಿ-9844947648, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಧ್ಯಾಹ್ನ 02 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಜಯ್ಯ ಸಿ.ಆರ್.ಪಿ ಸಿದ್ದಾಪೂರ-9845226328, ಯು.ಎಮ್. ಬಸವರಾಜ, ದೈ.ಶಿ. ಹೆಚ್.ಆರ್.ಸರೋಜಮ್ಮ ಕಾಲೇಜ್ ಗಂಗಾವತಿ-9945940950, ಚಾಂದಪಾಷಾ, ದೈ.ಶಿ. ಕೊಟ್ಟಿಪಾಟಿ ತೆಲಗು ಮಾಧ್ಯಮ-9900905452, ಶಿವಕಾಂತ, ದೈ.ಶಿ. ಜಿ.ಹೆಚ್.ಪಿ.ಎಸ್ ಆನೆಗುಂದಿ-9916799482, ಪಿ.ಮಲ್ಲಿಕಾರ್ಜುನ, ದೈ.ಶಿ. ಚೆನ್ನಬಸವ ಹಿ.ಪ್ರಾ. ಶಾಲೆ ಗಂಗಾವತಿ-9449448464, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ಮಹೇಶ ಕುಮಾರ, ಸಿಆರ್.ಪಿ. ಉಳೇನೂರು-9731971737, ಹೆಚ್.ವೈ.ಮಾಸ್ತಮ್ಮನವರ, ದೈ.ಶಿ.ಕೊಟ್ಟೂರೇಶ್ವರ ಸಂ.ಪ.ಪೂ ಕಾಲೇಜು-7411594342, ನಾಗರಾಜ, ದೈ.ಶಿ. ವಿವೇಕ ಭಾರತಿ ಪ್ರೌ.ಶಾಲೆ ಗಂಗಾವತಿ-9731293305, ಬಸವಂತಪ್ಪ ದೈ.ಶಿ. ಜಿ.ಹೆಚ್.ಪಿ.ಎಸ್ ಕೆಸರಹಟ್ಟಿ-9844782341, ಹನುಮಂತಪ್ಪ, ದೈ.ಶಿ. ವಿಶ್ವಚೇತನ ಹಿ.ಪ್ರಾ.ಶಾಲೆ, ಗಂಗಾವತಿ-9620675407, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೃಷ್ಣದೇವರಾಯ ವೃತ್ತ ಆನೆಗುಂದಿಯ ಸಹಾಯವಾಣಿ ಕೇಂದ್ರದಲ್ಲಿ ಬೆಳಿಗ್ಗೆ 06 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ನಾಗರಾಜ, ಸಿಆರ್‌ಪಿ ಗಂಗಾವತಿ-9880613171, ತಿಮ್ಮಣ್ಣ ನಾಯ್ಕ, ಸಿ.ಆರ್.ಪಿ. ಕಾರಟಗಿ -8867150470, ಯಂಕಪ್ಪ ತಳವಾರ, ದೈ.ಶಿ. ಜಿ.ಎಸ್.ಎಸ್ ಪ್ರೌ.ಶಾಲೆ ಗಂಗಾವತಿ-9449920094, ನರಸಿಂಹ, ದೈ.ಶಿ. ತಿಮ್ಮನಾಯಕ ಪ್ರೌ.ಶಾ. ವಡ್ಡರಹಟ್ಟಿ-9591483921, ವೀರಕುಮಾರ, ದೈ.ಶಿ ವಿವೇಕ ಭಾರತಿ ಹಿ.ಪ್ರಾ ಶಾಲೆ ಗಂಗಾವತಿ-7411353680, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಧ್ಯಾಹ್ನ 02 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವೇಂದ್ರಪ್ಪ ಸಿ.ಹೆಚ್. ಸಿ.ಆರ್.ಪಿ. ಹಿರೇಜಂತಕಲ್-9731708266,  ಮಾರುತಿ, ಸಿಆರ್‌ಪಿ ಚಳ್ಳೂರು- 9740038436, ರವಿನಾಯಕ ದೈ.ಶಿ. ಚಿ.ಎಮ್.ಎನ್ ಪ್ರೌ.ಶಾಲೆ ಕಾರಟಗಿ,  ಗಿರೀಶ, ದೈ.ಶಿ. ಶರಣಬಸವೇಶ್ವರ ಪ್ರೌಢ ಶಾಲೆ ಕಾರಟಗಿ, ದೊಡ್ಡಯ್ಯ ಹಿರೇಮಠ, ದೈ.ಶಿ. ಲಯನ್ ಹಿ.ಪ್ರಾ.ಶಾ ಗಂಗಾವತಿ-9900683289, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ಭೀಮಣ್ಣ ಕರಡಿ, ಸಿ.ಆರ್.ಪಿ ಕಾರಟಗಿ ಪೂರ್ವ-9900227932, ಸಚ್ಚಿದಾನಂದ, ಸಿ.ಆರ್.ಪಿ. ಚಿಕ್ಕಜಂತಕಲ್ 7259198047, ಶಿವರೆಡ್ಡಿ, ದೈ.ಶಿ. ಶಿವರುದ್ರಮುನಿ ಪ್ರೌ.ಶಾ. ಕನಕಗಿರಿ, ಹನುಮಂತಪ್ಪ ದೈ.ಶಿ. ವಿಶ್ವಚೇತನ ಹಿ.ಪ್ರಾ.ಶಾಲೆ ಗಂಗಾವತಿ, ಈಶಪ್ಪ, ದೈ.ಶಿ. ಸ.ಮಾ.ಹಿ.ಪ್ರಾ.ಶಾಲೆ ನವಲಿ-9535831941-9535831941, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಂಜನಾದ್ರಿ ದೇವಸ್ಥಾನದ ಮುಂಭಾಗ, ಆಂಜನೇಯ ಬೆಟ್ಟ, ಚಿಕ್ಕರಾಂಪುರ ಸಹಾಯವಾಣಿ ಕೇಂದ್ರದಲ್ಲಿ ಬೆಳಿಗ್ಗೆ 06 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಶಿವಪ್ರಾಸಾದ, ಸಿ.ಆರ್.ಪಿ.ಇಸ್ಲಾಂಪುರ ಪೂರ್ವ-9902037013, ಸಂಗಮೇಶ ಹಿರೇಮಠ, ಸಿ.ಆರ್.ಪಿ ಕನಕಗಿರಿ ದಕ್ಷಿಣ-9113578531, ಶ್ರೀಕಾಂತ, ಸಿ.ಆರ್.ಪಿ. ಆನೆಗುಂದಿ-9880989909, ಯಮನಪ್ಪ, ದೈ.ಶಿ. ಸ.ಹಿ.ಪ್ರಾ. ಶಾಲೆ ಮರ್ಲಾನಹಳ್ಳಿ-9591249132, ಬಸವಂತಪ್ಪ, ಸ.ಶಿ. ಸ.ಹಿ.ಪ್ರಾ.ಶಾ ಆನೆಗುಂದಿ-9448130148, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಧ್ಯಾಹ್ನ 02 ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ವಿಜಯಕುಮಾರ, ಸಿ.ಆರ್.ಪಿ ಇಸ್ಲಾಂಪೂರ ಪಶ್ಚಿಮ-9743220940, ಶಿವಪ್ಪ, ಸಿ.ಆರ್.ಪಿ ಹುಲಿಹೈದರ-8722012355, ವಿಠಲ ಜಿರಗಾಳಿ, ದೈ.ಶಿ.ಸಹಿ.ಪ್ರಾ ಶಾ.ಉಳೇನೂರು-9900299480, ರುದ್ರಗೌಡ, ಸಶಿ.ಸ.ಕಿ.ಪ್ರಾ.ಶಾ ಆನೆಗುಂದಿ-9008944528, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ರಾಜೀವ ಎಂ.ಆರ್. ಸಿ.ಆರ್.ಪಿ. ಕನಕಗಿರಿ, ಉತ್ತರ-9241213554, ಗವಿಸಿದ್ದಪ್ಪ, ಸಿ.ಆರ್.ಪಿ.ಬಸಾಪಟ್ಟಣ- 990143553, ಮುತ್ತಣ್ಣ, ದೈ.ಶಿ. ಸ.ಹಿ.ಪ್ರಾ.ಶಾ. ಚಳ್ಳೂರು- 9980239048, ಶಿವಕಾಂತ, ಸ.ಹಿ.ಪ್ರಾ.ಶಾ ಆನೆಗುಂದಿ-9916799482, ಶಶಿಧರ, ಸ.ಶಿ. ಸ.ಹಿ.ಪ್ರಾ.ಶಾ ರಾಂಪೂರ-7676358025, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿಯೋಜಿತ ಎಲ್ಲ ಸಿಬ್ಬಂದಿಗಳು ತಮಗೆ ವಹಿಸಲಾಗಿರುವ ಕೆಲಸಗಳಿಗೆ ಸಂಬಂಧಿಸಿದಂತೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಎಲ್ಲ ಪೂರ್ವ ಸಿದ್ದತೆಗಳನ್ನು ಖುದ್ದಾಗಿ ಮಾಡಿಕೊಂಡು, ವಹಿಸಿರುವ ಕೆಲಸವನ್ನು ನಿರ್ವಹಿಸಬೇಕು. ಯಾವುದೇ ನಿರ್ಲಕ್ಷ್ಯವನ್ನು ತೋರುವಂತಿಲ್ಲ. ಈ ಕೆಲಸದ ಹೊರತಾಗಿಯೂ ಯಾವುದೇ ಸಿಬ್ಬಂದಿಗೆ ಮೇಲಾಧಿಕಾರಿಗಳು ಸೂಚಿಸುವ ಯಾವುದೇ ಕೆಲಸವನ್ನು ನಿರ್ವಹಿಸತಕ್ಕದ್ದು. ಒಂದು ವೇಳೆ ಕೆಲಸಗಳಲ್ಲಿ ನಿರ್ಲಕ್ಷ್ಯತನ ತೋರಿರುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...