alex Certify ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾರಾಜಿಸಿದ ʼರಾಷ್ಟ್ರೀಯ ಲಾಂಛನʼ ದ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾರಾಜಿಸಿದ ʼರಾಷ್ಟ್ರೀಯ ಲಾಂಛನʼ ದ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ನೂತನ ಸಂಸತ್​ ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು.

ಈ ಕಂಚಿನ ಲಾಂಛನದ ಉದ್ಘಾಟನೆಯು ಈ ವರ್ಷದ ಕೊನೆಯಲ್ಲಿ ಹೊಸ ಕಟ್ಟಡವನ್ನು ತೆರೆಯುವ ಮೊದಲು ಪ್ರಮುಖ ಮೈಲಿಗಲ್ಲಾಗಿ ಕಾಣಿಸುತ್ತಿದೆ. ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಒಂದಷ್ಟು ಸಂಗತಿಗಳಿವೆ.

16,000 ಕೆಜಿ ತೂಕದ 6.5 ಮೀಟರ್​ ಭಾರತದ ಲಾಂಛನವನ್ನು ಭಾರತೀಯ ಕುಶಲಕಮಿರ್ಗಳು ಸಂರ್ಪೂಣವಾಗಿ ಕೈಯಿಂದ ರಚಿಸಿದ್ದಾರೆ ಮತ್ತು ಶುದ್ಧ ಕಂಚಿನಿಂದ ಮಾಡಲ್ಪಟ್ಟಿದೆ.

ಇದು ಸಾರಾನಾಥ್​ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟ ಅಶೋಕನ ಸಾರಾನಾಥ ಸಿಂಹದ ರೂಪಾಂತರವಾಗಿದೆ. ನಾಲ್ಕು ಸಿಂಹಗಳನ್ನು ಒಂದರ ಹಿಂದೆ ಒಂದು ಜೋಡಿಸಲಾಗಿದೆ. ಆನೆ, ಕುದುರೆ, ಗೂಳಿ, ಧರ್ಮ ಚಕ್ರಗಳನ್ನು ಉಬ್ಬು ಶಿಲ್ಪದಿಂದ ಅಲಂಕರಿಸಲಾಗಿದೆ.

ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯು ಎಂಟು ವಿಭಿನ್ನ ಹಂತದ ತಯಾರಿಕೆಯಲ್ಲಿ ಸಾಗಿತು.

ಕಂಪ್ಯೂಟರ್​ ಗ್ರಾಫಿಕ್​ ಸ್ಕೆಚ್​ ಅನ್ನು ತಯಾರಿಸಲಾಯಿತು ಮತ್ತು ಅದರ ಆಧಾರದ ಮೇಲೆ ಮಣ್ಣಿನ ಮಾದರಿಯನ್ನು ರಚಿಸಲಾಯಿತು. ಬಳಿಕ ಅಧಿಕಾರಿಗಳು ಅನುಮೋದಿಸಿದ ನಂತರ ಉಕ್ಕು ಮಾದರಿಯನ್ನು ತಯಾರಿಸಲಾಯಿತು.

ಆ ಮಾದರಿ ಬಳಸಿ ಅಚ್ಚನ್ನು ತಯಾರಿಸಲಾಯಿತು. ಅಚ್ಚನ್ನು ಬಳಸಿಕೊಂಡು ಕಂಚಿನಿಂದ ಪ್ರತಿಮೆಯನ್ನು ಹೊಳಪು ಬರುವಂತೆ ಮಾಡಲಾಯಿತು.ಕರಕುಶಲತೆಯ ದೃಷ್ಟಿಕೋನದಿಂದ ನೋಡುವುದಾದರೆ ಭಾರತದಲ್ಲಿ ಬೇರೆಲ್ಲಿಯೂ ಇದೇ ರೀತಿಯ ಲಾಂಛನದ ಚಿತ್ರಣವಿಲ್ಲ.

ದೇಶದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಕುಶಲಕಮಿರ್ಗಳು ಆರು ತಿಂಗಳ ಕಾಲ ಲಾಂಛನದ ವಿನ್ಯಾಸ, ಕರಕುಶಲ ಮತ್ತು ಎರಕಹೊಯ್ದ ಕೆಲಸ ಮಾಡಿದರು. ನೆಲದ ಮೇಲಿನ ಮಟ್ಟದಿಂದ 32 ಮೀಟರ್​ ಎತ್ತರದಲ್ಲಿ ಇದನ್ನು ಸ್ಥಾಪಿಸುವುದು ಸವಾಲಾಗಿತ್ತು.

ಲಾಂಚನಕ್ಕೆ ಸಹಕಾರಿಯಾಗಿ ನಿಲ್ಲುವಂತೆ 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ.

ಹೊಸ ಸಂಸತ್ ಭವನದ ಕೆಲಸವನ್ನು ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ಗೆ ವಹಿಸಲಾಗಿದೆ. 60,000 ಚ.ಮೀ. ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದೆ.

ಮಾಸ್ಟರ್ ಪ್ಲಾನ್ ಪ್ರಕಾರ, ಈಗಿರುವ ವೃತ್ತಾಕಾರದ ಸಂಸತ್ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಹಿಂದೆ ಈ ಹೊಸ ತ್ರಿಕೋನ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ.

ಹೊಸ ಸಂಸತ್ತಿನ ಕಲಾಪದಲ್ಲಿ 888 ಲೋಕಸಭಾ ಸದಸ್ಯರು, 384 ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಲೋಕಸಭೆಯ ಸಭಾಂಗಣದಲ್ಲಿ 1,272 ಆಸನಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಉಭಯ ಸದನಗಳ ಜಂಟಿ ಅಧಿವೇಶನವೂ ಸಾಧ್ಯವಾಗಲಿದೆ.

National Emblame: 16,000 kg pure bronze, 'Lost Wax' method! Why the unique newly established national symbol, you know? | How the national emblem on the new Parliament building is unqiue – JN

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...