ಆರೋಗ್ಯ ಮತ್ತು ವೆಲ್ನೆಸ್ ದಿಗ್ಗಜ ಹಮ್ದರ್ದ್ ಲ್ಯಾಬೋರೇಟರೀಸ್ ತನ್ನ ಉತ್ಪನ್ನಗಳ ಪೋರ್ಟ್ಫೋಲಿಯೋವನ್ನು 13 ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ವಿಸ್ತರಿಸಿದೆ.
ಓಟಿಎಕ್ಸ್ (ನ್ಯೂರಾಸೆಟಿಕಲ್ಸ್) ಮತ್ತು ಯುನಾನಿ ಕ್ಷೇತ್ರಗಳಲ್ಲಿ ಈ 13 ಉತ್ಪನ್ನಗಳನ್ನು ಹೊರತರುತ್ತಿದೆ ಹಮ್ದರ್ದ್.
ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ
ಒಟಿಎಕ್ಸ್ ಶ್ರೇಣಿಯಲ್ಲಿ ಈರುಳ್ಳಿ ತೈಲ, ಕಲೋಂಜಿ ತೈಲ, ಅಶೋಕರಿಶ್ತಾ, ನೊಜ಼ೀಮ್, ಲಿಕ್ವಿರಬ್, ಇಸಾಬ್ಗೋಲ್++ ಇದ್ದು, ಇವೆಲ್ಲಾ ಚರ್ಮ, ಕೂದಲು, ದೇಹದ ನೋವು, ಮಲಬದ್ಧತೆ, ಮೂಗು ಮತ್ತು ಎದೆ ಕಟ್ಟುವಿಕೆಗೆ ಔಷಧಗಳಾಗಿವೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಉತ್ಪನ್ನಗಳು ಹಮ್ದರ್ದ್ ವೆಲ್ನೆಸ್ ಕೇಂದ್ರಗಳಲ್ಲಿ ಲಭ್ಯವಿದ್ದು, ಜೊತೆಗೆ ಕೆಮಿಸ್ಟ್ ಶಾಪ್ಗಳು ಮತ್ತು ಇ-ಕಾಮರ್ಸ್ ತಾಣಗಳಲ್ಲೂ ಸಿಗಲಿವೆ ಎಂದು ಕಂಪನಿ ತಿಳಿಸಿದೆ.