ಪುರುಷರು, ಬಟ್ಟೆ, ಮುಖದ ಸೌಂದರ್ಯ, 6 ಪ್ಯಾಕ್ ಗೆ ಹೆಚ್ಚು ಗಮನ ನೀಡ್ತಾರೆ. ಆದ್ರೆ ಕೂದಲ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಕೂದಲಿಗೆ ಹೆಚ್ಚು ಆರೈಕೆ ಮಾಡದ ಕಾರಣ, ಕೂದಲಿನ ಅನೇಕ ಸಮಸ್ಯೆ ಎದುರಿಸುತ್ತಾರೆ. ಕೂದಲಿನ ಆರೈಕೆ ಜೊತೆಗೆ ವಾರಕ್ಕೆ ಒಮ್ಮೆಯಾದ್ರೂ ಎಣ್ಣೆ ಮಸಾಜ್ ಮಾಡುವುದು ಬಹಳ ಮುಖ್ಯ.
ಕೂದಲು ಒಣಗಿ, ನಿರ್ಜೀವಗೊಂಡಿರುತ್ತದೆ. ಇದ್ರಿಂದ ಕೂದಲು ಉದುರುತ್ತದೆ. ಕೂದಲು ಉದುರದೆ, ದಟ್ಟವಾಗಿರಬೇಕೆಂದ್ರೆ ಎಣ್ಣೆ ಹಚ್ಚುವುದು ಬಹಳ ಮುಖ್ಯ.
ಎಣ್ಣೆಯು ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ. ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಬೇಕು. ರಾತ್ರಿ ಕೂದಲಿಗೆ ಎಣ್ಣೆ ಮಸಾಜ್ ಮಾಡಿ ಮಲಗಬೇಕು. ಮರುದಿನ ಕೂದಲನ್ನು ಶಾಂಪೂವಿನಿಂದ ಸ್ವಚ್ಛಗೊಳಿಸಬೇಕು.
ಹರ್ಬಲ್ ಹೇರ್ ಆಯಿಲ್‌ನಿಂದ ನಿಧಾನವಾಗಿ ಕೂದಲನ್ನು ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.
ನೆತ್ತಿ ಶುಷ್ಕವಾದ್ರೆ ತಲೆಹೊಟ್ಟು ಕಾಡುತ್ತದೆ. ಇದ್ರಿಂದ ತಲೆಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲನ್ನು ಉತ್ತಮ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನೆತ್ತಿಗೆ ಪೋಷಣೆ ಸಿಗುತ್ತದೆ. ತಲೆಹೊಟ್ಟು ನಿವಾರಣೆಯಾಗುತ್ತದೆ.