ಮಾಲಿನ್ಯ ಮತ್ತು ಮಾನಸಿಕ ಒತ್ತಡದಿಂದಾಗಿ ಕೂದಲು ಉದುರುವುದು, ಬೆಳ್ಳಗಾಗಲು ಶುರುವಾಗುತ್ತದೆ.
ಇತ್ತೀಚಿನ ದಿನದಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. ಹೆಚ್ಚಿನ ಜನರು ಈ ಸಮಸ್ಯೆಯನ್ನು ತಪ್ಪಿಸಲು ದುಬಾರಿ ತೈಲಗಳು ಮತ್ತು ಬ್ರಾಂಡೆಡ್ ಉತ್ಪನ್ನಗಳನ್ನು ಖರೀದಿಸುತ್ತಾರೆ. ಅವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೂದಲಿನ ಮೇಲೆ ಹೆಚ್ಚು ಅಡ್ಡ ಪರಿಣಾಮ ಬೀರುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕೂದಲಿನ ಆರೈಕೆ ಮಾಡಬಹುದು.
ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದ್ದರೆ, ಬೆಲ್ಲ ಮತ್ತು ಮೆಂತ್ಯವನ್ನು ಸೇವಿಸುವುದು ಉತ್ತಮ. ಬೆಳಗ್ಗೆ ಎದ್ದ ತಕ್ಷಣ ಬೆಲ್ಲ ಮತ್ತು ಮೆಂತ್ಯವನ್ನು ಒಟ್ಟಿಗೆ ತಿಂದರೆ ಬಿಳಿ ಕೂದಲಿನ ಸಮಸ್ಯೆ ಬಹಳಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ. ಆಯುರ್ವೇದದ ಪ್ರಕಾರ, ಬಿಳಿ ಕೂದಲಿನ ಸಮಸ್ಯೆಗೆ ಇದು ಅತ್ಯುತ್ತಮ ಚಿಕಿತ್ಸೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ತುಂಬಾ ಹೆಚ್ಚು.
ಕಡಿಮೆ ವಯಸ್ಸಿನಲ್ಲಿಯೇ ನಿಮ್ಮ ಕೂದಲು ಬಿಳಿ ಮತ್ತು ದುರ್ಬಲವಾಗಿದ್ದರೆ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ಚೆನ್ನಾಗಿ ಪೇಸ್ಟ್ ಮಾಡಿ. ತಯಾರಿಸಿದ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಹೀಗೆ ತಿಂಗಳಿಗೆ ಎರಡು ಬಾರಿ ಮಾಡುವುದರಿಂದ ನಿಮ್ಮ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ ಹಾಗೂ ಬಲಗೊಳ್ಳುತ್ತದೆ.
ಮೆಂತ್ಯವನ್ನು ರುಬ್ಬುವ ಮೂಲಕ ಚೆನ್ನಾಗಿ ಪುಡಿ ಮಾಡಿ. ಈ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿನ ಬೇರುಗಳಿಗೆ ನಿಧಾನವಾಗಿ ಹಚ್ಚಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಇದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ. ಕೂದಲು ಉದುರುವಿಕೆ ಕೂಡ ಸಾಕಷ್ಟು ಕಡಿಮೆಯಾಗುತ್ತದೆ.