ಮೈಸೂರಿನ ಸುತ್ತ ಮುತ್ತ ಕೇಳಿ ಬರ್ತಿರುವ ಭೂಹಗರಣದ ವಿಚಾರವಾಗಿ ಮಾತನಾಡಿದ ಎಂಎಲ್ಸಿ ಹೆಚ್. ವಿಶ್ವನಾಥ್ ರೋಹಿಣಿ ಸಿಂಧೂರಿಯನ್ನ ಆರು ತಿಂಗಳುಗಳ ಕಾಲ ವಿಶೇಷ ಅಧಿಕಾರಿಯಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ಚಾಮುಂಡಿ ಬೆಟ್ಟದ ಸುತ್ತ ಮುತ್ತಲಿನ ಜಾಗವನ್ನೂ ಒತ್ತುವರಿ ಮಾಡಲಾಗಿದೆ. ಮೈಸೂರು ಈಗ ರಿಯಲ್ ಎಸ್ಟೇಟ್ ಆಗಿ ಹೋಗಿದೆ. ಶಿಲ್ಪಾನಾಗ್ ಈ ಹಗರಣದಲ್ಲಿ ಬಲಿಪಶು ಆಗಿದ್ದಾರೆ ಎಂದು ಗುಡುಗಿದ್ರು.
ಪ್ರಧಾನಿ ಮೋದಿ ಕೊರೊನಾ ಓಡಿಸಿ ಎಂದು ಕರೆ ನೀಡಿದ್ರೆ ಇವರೆಲ್ಲ ಐಎಎಸ್ ಅಧಿಕಾರಿಗಳನ್ನ ಓಡಿಸುತ್ತಿದ್ದಾರೆ. ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕನ್ನಿಟ್ಟು ರೋಹಿಣಿ ಸಿಂಧೂರಿಯನ್ನ ಶೂಟ್ ಮಾಡಿದ್ದಾರೆ. ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಸಾವಿರಾರು ಎಕರೆ ಜಾಗವನ್ನ ನುಂಗಿದ್ದಾರೆ. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಇಬ್ಬರೂ ಒಳ್ಳೆಯ ಅಧಿಕಾರಿಗಳು. ಆದರೆ ರಾಜಕಾರಣಿಗಳ ಸ್ವಾರ್ಥದಿಂದ ಈ ರೀತಿ ಆಗಿದೆ ಎಂದು ಹೇಳಿದ್ರು.
ಭೂ ಅಕ್ರಮದ ಬಗ್ಗೆ ತನಿಖೆ ಮಾಡಲು ಬಿಡಿ. ತಪ್ಪು ಮಾಡಿಲ್ಲ ಎಂದ ಮೇಲೆ ಹೆದರಿಕೆ ಏಕೆ..? ಸಾ.ರಾ. ಮಹೇಶ್ರ ಪ್ರತಿಭಟನೆಯನ್ನ ನಾನು ಸ್ವಾಗತಿಸುತ್ತೇನೆ. ಆದರೆ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಕಲ್ಯಾಣ ಮಂಟಪದ ಬಗ್ಗೆ ಸೂಕ್ತ ದಾಖಲೆ ನೀಡಿ ಎಂದು ಹೇಳಿದ್ರು.