alex Certify ‘ಬಾಂಬೆ ಸದಸ್ಯರ’ ಕ್ಷೇತ್ರ ಭೂಲೋಕದ ಸ್ವರ್ಗಗಳಾಗಿವೆಯೇ? ಸಿಎಂ ಯಡಿಯೂರಪ್ಪಗೆ ಮಾಜಿ ಸಿಎಂ HDK ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಂಬೆ ಸದಸ್ಯರ’ ಕ್ಷೇತ್ರ ಭೂಲೋಕದ ಸ್ವರ್ಗಗಳಾಗಿವೆಯೇ? ಸಿಎಂ ಯಡಿಯೂರಪ್ಪಗೆ ಮಾಜಿ ಸಿಎಂ HDK ತಿರುಗೇಟು

ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಪ್ರಚಾರಸಭೆಯಲ್ಲಿ ಹೇಳಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗದಿಂದ ಯಡಿಯೂರಪ್ಪ ಅವರಿಗೆ ಅಧಿಕಾರ ದೊರೆತು ಎರಡು ವರ್ಷಗಳಾಗುತ್ತಾ ಬಂದಿದೆ. ಇದುವರೆಗೆ ಮಸ್ಕಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಉಪಚುನಾವಣೆಯ ಮುಹೂರ್ತ ಬೇಕಿತ್ತಾ? ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಮುಹೂರ್ತ ಬಂದಿದೆ ಒಪ್ಪೋಣ. ಆದರೆ, ಒಂದು ವರ್ಷದ ಹಿಂದೆಯೇ ಬಾಂಬೆ ತಂಡದ ಸದಸ್ಯರ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಆ ಕ್ಷೇತ್ರಗಳ ಅಭಿವೃದ್ಧಿ ಆಗಿದೆಯೇ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದ್ದಾರೆ.

ಚುನಾವಣೆ ಕಾಲದ ನಿಮ್ಮ ಅಭಿವೃದ್ಧಿ ಜಪ ಬೂಟಾಟಿಕೆ ಎಂದು ನಿಮಗೆ ಅನಿಸುವುದಿಲ್ಲವೆ? ಮಸ್ಕಿ ಕ್ಷೇತ್ರ ಇರಲಿ, ಬೇರೆ ಕ್ಷೇತ್ರವಿರಲಿ ಅಭಿವೃದ್ಧಿಗೆ ಸರ್ಕಾರದ ಹಣವೆಲ್ಲಿದೆ? ರಾಜ್ಯದ ತೆರಿಗೆ ಹಣ ಜನರ ಬೆವರಿನ ಋಣ ನಿಮ್ಮ ಸರ್ಕಾರದಲ್ಲಿರುವ ‘ಏಕಗವಾಕ್ಷಿ’ಗೆ ಅಪೋಷನವಾಗುತ್ತಿಲ್ಲವೇ? ಚುನಾವಣೆ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ‘ಏಕಗವಾಕ್ಷಿ’ ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು ಎಂದು ಹೆಚ್.ಡಿ.ಕೆ. ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...