ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹೆಚ್ಚಾದಂತೆ ಸೈದ್ಧಾಂತಿಕ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕೂಡ ಏರಿಕೆ ಕಾಣುತ್ತಲೇ ಇವೆ. ದಿನೇದಿನೆ ಹೊಸ ಆನ್‌ಲೈನ್ ವಂಚನೆ, ಮಾನಸಿಕ ಕಿರುಕುಳದ ಪ್ರಕರಣಗಳು ಕೂಡ ಹೆಚ್ಚೆಚ್ಚು ಗಮನಕ್ಕೆ ಬರುತ್ತಿವೆ. ಅದರಲ್ಲೂ ಯುವ ಸಮುದಾಯವಂತೂ ತಲೆ ತುಂಬ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಂನಲ್ಲಿನ ಆಗುಹೋಗುಗಳನ್ನೇ ತುಂಬಿಕೊಂಡಿದೆ.
ಅಂಥವರ ಪೈಕಿ ಹೆಣ್ಣುಮಕ್ಕಳಿಗೆ ಟ್ರೋಲ್ ಮಾಡುವುದು, ಚುಡಾಯಿಸುವುದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವಂತಹವರು ಫೇಸ್‌ಬುಕ್‌ನಲ್ಲಿ ಕಡಿಮೆ ಏನಿಲ್ಲ. ಇಂತಹದ್ದನ್ನು ಬುಲ್ಲಿಯಿಂಗ್ ಎಂದು ಕಂಪನಿ ಪರಿಗಣಿಸಿ, ಖಡಕ್ ಎಚ್ಚರಿಕೆ ಕೊಟ್ಟಿದ್ದರೂ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಆಟ ಆಡುವ ವಿಕೃತ ಮನಃಸ್ಥಿತಿಯವರು ಇದ್ದೇ ಇದ್ದಾರೆ.
SHOCKING NEWS: ಜನ್ಮದಿನದ ಸಂಭ್ರಮದ ವೇಳೆ ಸಾಂಬಾರ್ ಪಾತ್ರೆಗೆ ಬಿದ್ದ ಮಗು; ದಾರುಣ ಸಾವು
ಈ ಬುಲ್ಲಿಯಿಂಗ್‌ಗೆ ಸರಿಯಾದ ಅಂಕುಶ ಹಾಕಲು ಗುರುಗ್ರಾಮದ 13 ವರ್ಷದ ಬಾಲಕಿ ಮುಂದಾಗಿದ್ದಾಳೆ. ಆಕೆಯು ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ತಾನು ಅಭಿವೃದ್ಧಿಪಡಿಸಿರುವ ಬುಲ್ಲಿಯಿಂಗ್ ತಡೆ ಆ್ಯಪ್ ’ಕವಚ’ ಪ್ರದರ್ಶಿಸಿದ್ದಾಳೆ. ಈಕೆಯ ಹೆಸರು ಅನುಷ್ಕಾ ಜಾಲಿ ಎಂದು.
ಕವಚ ಆ್ಯಪ್ ಅನ್ನು ಕೇವಲ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಶಾಲೆಗಳಲ್ಲಿ ನೇರವಾಗಿ ಮಕ್ಕಳು ಬುಲ್ಲಿಯಿಂಗ್ ಎದುರಿಸಿದಾಗಲೂ ಪೋಷಕರ ಮೂಲಕ ಪೊಲೀಸರಿಗೆ ದೂರು ನೀಡಲು ಕೂಡ ಬಳಸಬಹುದಾಗಿದೆ. ಅನುಷ್ಕಾ ಕೂಡ 9ನೇ ವರ್ಷದಲ್ಲಿ ಬುಲ್ಲಿಯಿಂಗ್ ಎದುರಿಸಿದ ಬಳಿಕ ಅದರ ವಿರುದ್ಧ ಸಮರ ಸಾರಲು ಮುಂದಾಗಿದ್ದಾಳೆ ಎಂದು ತಿಳಿದುಬಂದಿದೆ.
‘ಕವಚ ‘ ಆ್ಯಪ್‌ನ ಆಧುನಿಕ ಆವೃತ್ತಿಯ ಅಭಿವೃದ್ಧಿಯಲ್ಲಿ ಆಸಕ್ತಿ ತೋರಿರುವ ಬೋಟ್ ಕಂಪನಿ ಸಹಸ್ಥಾಪಕ ಅಮನ್ ಗುಪ್ತಾ ಮತ್ತು ಶಾದಿ.ಕಾಮ್ ಸ್ಥಾಪಕ ಅನುಪಮ್ ಮಿತ್ತಲ್ ಅವರು 50 ಲಕ್ಷ ರೂ.ವರೆಗೆ ಹೂಡಿಕೆಯ ಆಸಕ್ತಿ ತೋರಿಸಿದ್ದಾರೆ.
https://www.youtube.com/watch?v=DhFtTKdIJ8U