
ದೀಪಾವಳಿ ಹತ್ತಿರ ಬರ್ತಿದೆ. ಐದು ದಿನಗಳ ಕಾಲ ಅದ್ಧೂರಿ ದೀಪಾವಳಿ ಆಚರಣೆಗೆ ಜನರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಧನ್ ತೇರಸ್ ದಿನ ಹಬ್ಬಕ್ಕಾಗಿ ಜನರು, ವಾಹನ, ಬಂಗಾರ ಸೇರಿದಂತೆ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಈ ಬಾರಿ ಧನ್ ತೇರಸ್ ಗಿಂತ ಮೊದಲೇ ಬಂಗಾರ ಖರೀದಿಗೆ ಶುಭ ಯೋಗ ಕೂಡಿ ಬಂದಿದೆ. 60 ವರ್ಷಗಳ ನಂತ್ರ ಶುಭಯೋಗ ಬಂದಿದೆ.
ದೀಪಾವಳಿಗೆ ಮೊದಲೇ ಆಭರಣ, ವಸ್ತು ಖರೀದಿಸಲು ಅಕ್ಟೋಬರ್ 28 ಅತ್ಯಂತ ಶುಭದಿನ. ಮಕರ ರಾಶಿಯಲ್ಲಿ ಶನಿ-ಗುರುಗಳ ಸಂಯೋಗದಿಂದಾಗಿ, ಪುಷ್ಯ ನಕ್ಷತ್ರವು ಅತ್ಯಂತ ಮಂಗಳಕರವಾಗಿರಲಿದೆ. ಸರ್ವಾರ್ಥಸಿದ್ಧಿ ಯೋಗವು ಅದೇ ದಿನ ಬೆಳಿಗ್ಗೆ 6.33 ರಿಂದ 9.42 ರವರೆಗೆ ಇರಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಮಾಡಿದ ಖರೀದಿ ಮಂಗಳಕರವಾಗಿರಲಿದೆ. ಮನೆ-ಆಸ್ತಿ, ಚಿನ್ನ-ಬೆಳ್ಳಿ, ಕಾರು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪೀಠೋಪಕರಣ ಇತ್ಯಾದಿಗಳನ್ನು ಖರೀದಿಸಬಹುದು. ಪುಸ್ತಕ ಖರೀದಿಗೂ ಈ ದಿನ ಮಂಗಳಕರವಾಗಿದೆ.
ಖರೀದಿಗೆ ಮಾತ್ರವಲ್ಲದೆ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಕಬ್ಬಿಣ, ಸಿಮೆಂಟ್, ತೈಲ ಕಂಪನಿ, ಜವಳಿ, ಎಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ ಕಂಪನ ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತವಾಗಲಿದೆ.