alex Certify ಮಸೀದಿ ಮೇಲೆ ಐಸಿಸ್ ಉಗ್ರರ ದಾಳಿ: ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸೀದಿ ಮೇಲೆ ಐಸಿಸ್ ಉಗ್ರರ ದಾಳಿ: ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಜನ ಸಾವು

ಇರಾನ್‌ ನ ಶಿರಾಜ್ ನಗರದ ಶಿಯಾ ಮಸೀದಿ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದು, 15 ಜನರನ್ನು ಹತ್ಯೆ ಮಾಡಿದ್ದಾರೆ.

ಇರಾನ್ ದಕ್ಷಿಣ ನಗರವಾದ ಶಿರಾಜ್‌ ನಲ್ಲಿರುವ ಶಿಯಾಗಳ ಪ್ರಮುಖ ಪವಿತ್ರ ಸ್ಥಳದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಕನಿಷ್ಠ 15 ಜನರನ್ನು ಕೊಂದಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇಬ್ಬರು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಮತ್ತು ಮೂರನೆಯವರು ಪರಾರಿಯಾಗಿದ್ದಾರೆ. ಸುನ್ನಿ ಉಗ್ರಗಾಮಿಗಳು ಈ ಹಿಂದೆ ದೇಶದ ಶಿಯಾ ಬಹುಸಂಖ್ಯಾತರ ಪವಿತ್ರ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು. ಒಂದು ತಿಂಗಳಿನಿಂದ ಇರಾನ್ ಸರ್ಕಾರ ವಿರೋಧಿ ಪ್ರತಿಭಟನೆಗಳಿಂದ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...