alex Certify ಹಂತಕರ ಅಟ್ಟಹಾಸ, ಭಾರೀ ಗುಂಡಿನ ದಾಳಿಯಲ್ಲಿ 13 ಪೊಲೀಸರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂತಕರ ಅಟ್ಟಹಾಸ, ಭಾರೀ ಗುಂಡಿನ ದಾಳಿಯಲ್ಲಿ 13 ಪೊಲೀಸರ ಹತ್ಯೆ

ಮೆಕ್ಸಿಕೋ ಸಿಟಿ: ಡ್ರಗ್ ಗ್ಯಾಂಗ್ ನ ಬಂದೂಕುಧಾರಿಗಳು ಪೊಲೀಸ್ ಬೆಂಗಾವಲು ಪಡೆಯ ಮೇಲೆ ಫೈರಿಂಗ್ ಮಾಡಿದ್ದು, ಗುಂಡಿನ ದಾಳಿಯಲ್ಲಿ ಪೊಲೀಸರು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 5 ಜನ ಪ್ರಾಸಿಕ್ಯೂಷನ್ ತನಿಖಾಧಿಕಾರಿಗಳು ಸೇರಿದ್ದಾರೆ.

ಸೆಂಟ್ರಲ್ ಮೆಕ್ಸಿಕೋದಲ್ಲಿ ಪೊಲೀಸ್ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಭೀಕರ ದಾಳಿ ನಡೆಸಿದ್ದಾರೆ. ಡ್ರಗ್ ಗ್ಯಾಂಗ್ ವೊಂದಕ್ಕೆ ಸೇರಿದ ದುಷ್ಕರ್ಮಿಗಳು ಈ ದಾಳಿ ಮಾಡಿದ್ದಾರೆ.

ಇದು ಎರಡನೇ ಅತಿ ದೊಡ್ಡ ಹತ್ಯಾಕಾಂಡವಾಗಿದೆ. 2019 ರಲ್ಲಿ ಇದೇ ಮಾದರಿ ದಾಳಿಯಲ್ಲಿ 14 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ದಾಳಿಕೋರ ಡ್ರಗ್ಸ್ ಗ್ಯಾಂಗ್ ಹಂತಕರ ಸದೆಬಡಿಯಲು ಭದ್ರತಾಪಡೆ, ರಾಷ್ಟ್ರೀಯ ಗಾರ್ಡ್ ಸೈನಿಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...