
ಸುದ್ದಿ ವಾಹಿನಿಯೊಂದರ ಲೈವ್ ವರದಿ ನಡೆಯುತ್ತಿರುವಾಗಲೇ ಗನ್‌ಧಾರಿ ಹಂತಕನೊಬ್ಬ ವರದಿಗಾರ ಹಾಗೂ ಇತರ ಸಿಬ್ಬಂದಿಯನ್ನು ಬೆದರಿಸಿ ಲೂಟಿ ಮಾಡುತ್ತಿರುವ ಘಟನೆ ಈಕ್ವೆಡಾರ್‌ನಲ್ಲಿ ಕಳೆದ ಶುಕ್ರವಾರ ಜರುಗಿದೆ.
ವರದಿಗಾರ ಹಾಗೂ ಇತರ ಸಿಬ್ಬಂದಿಗೆ ತಮ್ಮ ಬಳಿ ಇರುವ ದುಡ್ಡನ್ನೆಲ್ಲಾ ಕೊಡುವಂತೆ ಗನ್‌ಧಾರಿ ಬೆದರಿಕೆಯೊಡ್ಡುವುದನ್ನು ನೋಡಬಹುದಾಗಿದೆ. ಈಕ್ವೆಡಾರ್‌ನ ಕ್ರೀಡಾ ವರದಿಗಾರ ಡಿಯೆಗೋ ಅರ್ಡಿನೋಲಾ ಅವರು ಡೈರೆಕ್ಟೀವಿ ಸ್ಪೋರ್ಟ್ಸ್ ವಾಹಿನಿಗೆ ಗಯಾಕಿಲ್ ನಗರದ ಎಸ್ಟೇಡಿಯೋ ಮಾನ್ಯುಮೆಂಟಲ್ ಕ್ರೀಡಾಂಗಣದಿಂದ ವರದಿ ಮಾಡುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಹಂತಕ ಆತನ ಮುಖಕ್ಕೆ ಗನ್ ಇಟ್ಟು ಬೆದರಿಸಿದ್ದಾನೆ.
ವಾಹನಗಳ ಮೇಲೆ ಜಾತಿ ಬೋರ್ಡ್ ಹಾಕಿಕೊಂಡ್ರೆ ಬೀಳುತ್ತೆ ಫೈನ್..!
ಆರ್ಡಿನೋಲಾರನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾ ಚಾಲ್ತಿಯಲ್ಲಿದ್ದ ಕಾರಣ ಘಟನೆಯ ಅಷ್ಟೂ ದೃಶ್ಯವಾಳಿ ರೆಕಾರ್ಡ್ ಆಗಿದ್ದು, ವರದಿಗಾರ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.