ಹಬ್ಬಕ್ಕೆ ಬಹಳ ಸುಲಭವಾಗಿ ಮಾಡುವ ಸಿಹಿ ತಿನಿಸೆಂದರೆ ಅದು ಗುಲಾಬ್ ಜಾಮೂನ್. ಅನೇಕರು ಈ ಖಾದ್ಯಕ್ಕೆ ವಿಭಿನ್ನವಾಗಿ ತಿರುವು ನೀಡಲು ಪ್ರಯತ್ನ ಮಾಡುತ್ತಾರೆ.
ಗುಲಾಬ್ ಜಾಮೂನ್ ಅನ್ನು ಐಸ್ ಕ್ರೀಂ ನಿಂದ ಹಿಡಿದು ಮಿಲ್ಕ್ ಶೇಕ್ ವರೆಗೂ ಸವಿಯಬಹುದು. ಆದರೆ ಎಂದಾದರೂ ಆಲ್ಕೋಹಾಲ್ ಜೊತೆ ಸವಿಯೋದನ್ನು ನೋಡಿದ್ದೀರಾ..? ಇಲ್ಲ ಅಲ್ವಾ..? ಸದ್ಯ, ಹಂಚಿಕೊಳ್ಳಲಾಗಿರುವ ವಿಡಿಯೋವೊಂದು ನಿಮಗೆ ಆಶ್ಚರ್ಯ ತರಿಸುವುದಂತೂ ಸುಳ್ಳಲ್ಲ.
ಹೌದು, ಗುಲಾಬ್ ಜಾಮೂನ್ ಗೆ ವಿಶಿಷ್ಟವಾದ ಪ್ರಯೋಗ ಮಾಡಲು ಮುಂದಾದ ವ್ಯಕ್ತಿಯೊಬ್ಬರು, ಆಲ್ಕೋಹಾಲ್ ಅನ್ನು ಸಿರಿಂಜ್ ನಲ್ಲಿ ತುಂಬಿ ಜಾಮೂನ್ ಗೆ ಚುಚ್ಚಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಕ್ಕರೆ ಸಿರಪ್ ಇದ್ದ ಜಾಮೂನ್ ಗೆ ರಮ್ ಅನ್ನು ವ್ಯಕ್ತಿ ಚಿಮುಕಿಸಿದ್ದಾನೆ.
ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ
ಸದ್ಯ, ಈ ವಿಡಿಯೋವನ್ನು 5.1 ಮಿಲಿಯನ್ ಗಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಪಾಕವಿಧಾನ ಮಾಡಿರುವ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ. ಗುಲಾಬ್ ಜಾಮೂನ್ ಬದಲಾಗಿ ರಮ್ ಬಾಲ್ ಅಂತಾ ಕೆಲವು ಬಳಕೆದಾರರು ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
https://www.youtube.com/watch?v=e1jflzEQHKA