alex Certify ಈ ಮೂರು ರಾಜ್ಯಗಳಲ್ಲಿ ಅರ್ಭಟಿಸಲಿದೆ ‘ಗುಲಾಬ್​’ ಚಂಡಮಾರುತ….! ಯೆಲ್ಲೋ ಅಲರ್ಟ್​ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮೂರು ರಾಜ್ಯಗಳಲ್ಲಿ ಅರ್ಭಟಿಸಲಿದೆ ‘ಗುಲಾಬ್​’ ಚಂಡಮಾರುತ….! ಯೆಲ್ಲೋ ಅಲರ್ಟ್​ ಘೋಷಣೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 12 – 24 ಗಂಟೆಯು ಕೆಲ ರಾಜ್ಯಗಳ ಪಾಲಿಗೆ ನಿರ್ಣಾಯಕ ಘಟ್ಟವಾಗಿದೆ. ಓಡಿಶಾ ಹಾಗೂ ಆಂಧ್ರ ಪ್ರದೇಶದ ಕೆಲವು ಭಾಗಗಳಿಗೆ ಹವಾಮಾನ ಇಲಾಖೆಯು ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ನಿರ್ಮಾಣವಾಗಿದ್ದು ಇದರ ಪರಿಣಾಮವಾಗಿ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಓಡಿಶಾದ ದಕ್ಷಿಣ ಭಾಗದ ಮೇಲೆ ಹಾದು ಹೋಗುವ ಸಾಧ್ಯತೆ ಇದೆ. ಹೀಗಾಗಿ ಆಂಧ್ರಪ್ರದೇಶ, ಓಡಿಶಾ ಹಾಗೂ ಪಶ್ಚಿಮ ಬಂಗಾಳದ ಕೆಲ ಪ್ರದೇಶಗಳಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಾಗೂ ಈ ಚಂಡಮಾರುತಕ್ಕೆ ​ ಗುಲಾಬ್​ ಎಂದು ಹೆಸರಿಡಲಾಗಿದೆ.

ಈ ಚಂಡಮಾರುತದ ಬಗ್ಗೆ ಐಎಂಡಿ ಟ್ವಿಟರ್​ ಮೂಲಕ ಮಾಹಿತಿ ನೀಡಿದೆ. ಟ್ವಿಟರ್​ನಲ್ಲಿ ನಾಳೆ ಸಂಜೆಯೊಳಗಾಗಿ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಚಂಡಮಾರುತ ಹಾದುಹೋಗಬಹುದು ಎಂಬ ಮಾಹಿತಿ ನೀಡಲಾಗಿದೆ.

ಚಂಡಮಾರುತವನ್ನು ಎದುರಿಸಲು ಸಜ್ಜಾಗಿರುವ ಕೊಲ್ಕತ್ತಾ ಪೊಲೀಸರು ಯೂನಿಫೈಡ್​ ಕಮಾಂಡ್​ ಸೆಂಟರ್​ ಎಂಬ ನಿಯಂತ್ರಣ ಕೊಠಡಿಯನ್ನು ತೆರೆದಿದ್ದಾರೆ. ಎನ್‌ಡಿಆರ್‌ಎಫ್‌ನ 15 ತಂಡಗಳನ್ನು ಪಶ್ಚಿಮ ಬಂಗಾಳದ 15 ಕರಾವಳಿ ಪ್ರದೇಶಗಳಲ್ಲಿ ಮತ್ತು 4 ತಂಡಗಳನ್ನು ಪ್ರವಾಹ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.

— India Meteorological Department (@Indiametdept) September 25, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...