
ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಓಡಿಶಾದ ದಕ್ಷಿಣ ಭಾಗದ ಮೇಲೆ ಹಾದು ಹೋಗುವ ಸಾಧ್ಯತೆ ಇದೆ. ಹೀಗಾಗಿ ಆಂಧ್ರಪ್ರದೇಶ, ಓಡಿಶಾ ಹಾಗೂ ಪಶ್ಚಿಮ ಬಂಗಾಳದ ಕೆಲ ಪ್ರದೇಶಗಳಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಾಗೂ ಈ ಚಂಡಮಾರುತಕ್ಕೆ ಗುಲಾಬ್ ಎಂದು ಹೆಸರಿಡಲಾಗಿದೆ.
ಈ ಚಂಡಮಾರುತದ ಬಗ್ಗೆ ಐಎಂಡಿ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಟ್ವಿಟರ್ನಲ್ಲಿ ನಾಳೆ ಸಂಜೆಯೊಳಗಾಗಿ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಚಂಡಮಾರುತ ಹಾದುಹೋಗಬಹುದು ಎಂಬ ಮಾಹಿತಿ ನೀಡಲಾಗಿದೆ.
ಚಂಡಮಾರುತವನ್ನು ಎದುರಿಸಲು ಸಜ್ಜಾಗಿರುವ ಕೊಲ್ಕತ್ತಾ ಪೊಲೀಸರು ಯೂನಿಫೈಡ್ ಕಮಾಂಡ್ ಸೆಂಟರ್ ಎಂಬ ನಿಯಂತ್ರಣ ಕೊಠಡಿಯನ್ನು ತೆರೆದಿದ್ದಾರೆ. ಎನ್‌ಡಿಆರ್‌ಎಫ್‌ನ 15 ತಂಡಗಳನ್ನು ಪಶ್ಚಿಮ ಬಂಗಾಳದ 15 ಕರಾವಳಿ ಪ್ರದೇಶಗಳಲ್ಲಿ ಮತ್ತು 4 ತಂಡಗಳನ್ನು ಪ್ರವಾಹ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.