alex Certify ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಕಿಯ ಮೇಲೆ ಹಣದ ಹೊಳೆ….! ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಕಿಯ ಮೇಲೆ ಹಣದ ಹೊಳೆ….! ದಂಗಾದ ನೆಟ್ಟಿಗರು

ಗುಜರಾತ್​ನ ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅಹಮದಾಬಾದ್​​ನಲ್ಲಿ ಹಿಂದೂ ಧರ್ಮದ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.

ವಿಡಿಯೋದಲ್ಲಿ ವೇದಿಕೆಯ ಮೇಲೆ ಕುಳಿತ ಊರ್ವಶಿ ಹಾರ್ಮೋನಿಯಂ ಭಾರಿಸುತ್ತಾ ಹಾಡನ್ನು ಹಾಡುತ್ತಿದ್ದರು. ಊರ್ವಶಿ ಬಳಿಗೆ ಬಂದ ವ್ಯಕ್ತಿಯೊಬ್ಬ ಡ್ರಮ್​ ತುಂಬಾ ಇದ್ದ ಹಣವನ್ನು ಊರ್ವಶಿ ಮೈಮೇಲೆ ಸುರುವಿದ್ದಾರೆ. ಪ್ರೇಕ್ಷಕರು ಕೂಡ ಊರ್ವಶಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ಹಾರ್ಮೋನಿಯಂ ಮೇಲಂತೂ ಹಣದ ರಾಶಿಯೇ ತುಂಬಿತ್ತು. ಆ ಎಲ್ಲಾ ಹಣವನ್ನು ಬದಿಗೊತ್ತಿದ ಊರ್ವಶಿ ತಮ್ಮ ಹಾಡನ್ನು ಮುಂದುವರಿಸಿದ್ರು.

ಇನ್​ಸ್ಟಾಗ್ರಾಂನಲ್ಲಿ ಊರ್ವಶಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಮೂಲಕ ಎಲ್ಲರ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಪೋಸ್ಟ್​ಗೆ ಹಣದ ಮಳೆ ಎಂಬ ಹ್ಯಾಶ್​ಟ್ಯಾಗ್​ನ್ನೂ ಊರ್ವಶಿ ಬಳಕೆ ಮಾಡಿದ್ದಾರೆ.

ಕಮೆಂಟ್​ ಸೆಕ್ಷನ್​ನಲ್ಲಿ ನೆಟ್ಟಿಗರು ಊರ್ವಶಿಗೆ ಅನೇಕ ಪ್ರಶ್ನೆಗಳನ್ನು ಹಾಕಲು ಆರಂಭಿಸಿದ್ದಾರೆ. ಇಷ್ಟೆಲ್ಲ ಹಣವನ್ನಿಟ್ಟುಕೊಂಡು ಏನು ಮಾಡ್ತೀರಿ ಎಂದು ಒಬ್ಬರು ಕೇಳಿದ್ರೆ ಇನ್ನೊಬ್ಬರು ನಿಮ್ಮ ಧ್ವನಿಯಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ಹೊಗಳಿದ್ದಾರೆ.

ಊರ್ವಶಿ ಗುಜರಾತ್​ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿ ಗಾಯಕಿಯಾಗಿದ್ದಾರೆ. ದ್ವಾರಿಕಾ, ಭಾವ್​ ನಾ ಫೇರಾ ಸೇರಿದಂತೆ ಸಾಕಷ್ಟು ಹಾಡುಗಳು ಊರ್ವಶಿಗೆ ಹೆಸರು ತಂದುಕೊಟ್ಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...