ಗುಜರಾತ್ನ ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅಹಮದಾಬಾದ್ನಲ್ಲಿ ಹಿಂದೂ ಧರ್ಮದ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.
ವಿಡಿಯೋದಲ್ಲಿ ವೇದಿಕೆಯ ಮೇಲೆ ಕುಳಿತ ಊರ್ವಶಿ ಹಾರ್ಮೋನಿಯಂ ಭಾರಿಸುತ್ತಾ ಹಾಡನ್ನು ಹಾಡುತ್ತಿದ್ದರು. ಊರ್ವಶಿ ಬಳಿಗೆ ಬಂದ ವ್ಯಕ್ತಿಯೊಬ್ಬ ಡ್ರಮ್ ತುಂಬಾ ಇದ್ದ ಹಣವನ್ನು ಊರ್ವಶಿ ಮೈಮೇಲೆ ಸುರುವಿದ್ದಾರೆ. ಪ್ರೇಕ್ಷಕರು ಕೂಡ ಊರ್ವಶಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ಹಾರ್ಮೋನಿಯಂ ಮೇಲಂತೂ ಹಣದ ರಾಶಿಯೇ ತುಂಬಿತ್ತು. ಆ ಎಲ್ಲಾ ಹಣವನ್ನು ಬದಿಗೊತ್ತಿದ ಊರ್ವಶಿ ತಮ್ಮ ಹಾಡನ್ನು ಮುಂದುವರಿಸಿದ್ರು.
ಇನ್ಸ್ಟಾಗ್ರಾಂನಲ್ಲಿ ಊರ್ವಶಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಮೂಲಕ ಎಲ್ಲರ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಪೋಸ್ಟ್ಗೆ ಹಣದ ಮಳೆ ಎಂಬ ಹ್ಯಾಶ್ಟ್ಯಾಗ್ನ್ನೂ ಊರ್ವಶಿ ಬಳಕೆ ಮಾಡಿದ್ದಾರೆ.
ಕಮೆಂಟ್ ಸೆಕ್ಷನ್ನಲ್ಲಿ ನೆಟ್ಟಿಗರು ಊರ್ವಶಿಗೆ ಅನೇಕ ಪ್ರಶ್ನೆಗಳನ್ನು ಹಾಕಲು ಆರಂಭಿಸಿದ್ದಾರೆ. ಇಷ್ಟೆಲ್ಲ ಹಣವನ್ನಿಟ್ಟುಕೊಂಡು ಏನು ಮಾಡ್ತೀರಿ ಎಂದು ಒಬ್ಬರು ಕೇಳಿದ್ರೆ ಇನ್ನೊಬ್ಬರು ನಿಮ್ಮ ಧ್ವನಿಯಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ಹೊಗಳಿದ್ದಾರೆ.
ಊರ್ವಶಿ ಗುಜರಾತ್ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿ ಗಾಯಕಿಯಾಗಿದ್ದಾರೆ. ದ್ವಾರಿಕಾ, ಭಾವ್ ನಾ ಫೇರಾ ಸೇರಿದಂತೆ ಸಾಕಷ್ಟು ಹಾಡುಗಳು ಊರ್ವಶಿಗೆ ಹೆಸರು ತಂದುಕೊಟ್ಟಿವೆ.