alex Certify ಗಂಡನಿಲ್ಲದ ವೇಳೆ ಇಣುಕಿ ನೋಡಿದ ಪಕ್ಕದ ಮನೆ ಕಿಡಿಗೇಡಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನಿಲ್ಲದ ವೇಳೆ ಇಣುಕಿ ನೋಡಿದ ಪಕ್ಕದ ಮನೆ ಕಿಡಿಗೇಡಿಯಿಂದ ಘೋರ ಕೃತ್ಯ

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ ನ ಶಾಪರ್ ವೆರಾವಲ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು 30 ವರ್ಷದ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೊಡೆದು ಕೊಂದಿದ್ದಾರೆ.

ಶಬ್ನಮ್ ಚೌಹಾಣ್ ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಆಕೆಯ ನೆರೆಹೊರೆಯವರಾದ ಇಬ್ಬರು ಆರೋಪಿಗಳನ್ನು ತನ್ನ ಮನೆಗೆ ಇಣುಕಿ ನೋಡಿದ್ದಕ್ಕಾಗಿ ಜಗಳವಾದ ನಂತರ ಈ ಕೃತ್ಯವೆಸಗಿದ್ದಾರೆ.

ಮೂರು ಮಕ್ಕಳ ತಾಯಿಯಾಗಿದ್ದ ಶಬ್ನಮ್ ಚೌಹಾಣ್ ಬಿಹಾರ ಮೂಲದವರಾಗಿದ್ದು, ವೃತ್ತಿಯಲ್ಲಿ ಸಾಂದರ್ಭಿಕ ಕಾರ್ಮಿಕನಾದ ತನ್ನ ಪತಿ ಸಂತೋಷ್ ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂವರು ಮಕ್ಕಳೊಂದಿಗೆ ಅವಳು ಒಂದು ಕೋಣೆಯ ಮನೆಯಲ್ಲಿ ವಾಸವಾಗಿದ್ದಳು.

ಇಬ್ಬರು ಆರೋಪಿಗಳಾದ ಸೋನು ಮತ್ತು ಆತನ ಸಹೋದರ ಶಂಭು ಉತ್ತರ ಪ್ರದೇಶದವರಾಗಿದ್ದಾರೆ. ಭಾನುವಾರ ಸಂಜೆ ಪತಿ ಮನೆಯಲ್ಲಿ ಇಲ್ಲದ ವೇಳೆ ಸೋನು ಶಬ್ನಮ್ ಗೆ ಕಿರುಕುಳ ನೀಡಿದ್ದಾಳೆ ಎನ್ನಲಾಗಿದೆ. ಕಿಟಕಿಯ ಮೂಲಕ ಆಕೆಯ ಮನೆಯೊಳಗೆ ಇಣುಕಿ ನೋಡುತ್ತಿದ್ದ ಅವನ ವರ್ತನೆಗೆ ಶಬ್ಮ್ ವಿರೋಧ ವ್ಯಕ್ತಪಡಿಸಿದ್ದಾಳೆ. ನಂತರ ಅವನು ಮತ್ತು ಅವನ ಸಹೋದರ ಶಂಭು ಅವಳ ಮನೆಗೆ ನುಗ್ಗಿದರು. ಇಬ್ಬರು ಅವಳ ಕೂದಲು ಹಿಡಿದು ಎಳೆದು ಹೊರಗೆ ಕರೆದುಕೊಂಡು ಕಬ್ಬಿಣದ ಪೈಪ್ ಬಳಸಿ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ತಿಳಿದ ಸಂತೋಷ್ ಶಬ್ನಮ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಜ್‌ ಕೋಟ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಸೋನು ನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಸಹೋದರ ಪರಾರಿಯಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...