alex Certify ದೆವ್ವಗಳು ಕಾಟ ಕೊಡುತ್ತಿವೆ ಎಂದು ಪೊಲೀಸ್‌ ಠಾಣೆಗೆ ದೂರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆವ್ವಗಳು ಕಾಟ ಕೊಡುತ್ತಿವೆ ಎಂದು ಪೊಲೀಸ್‌ ಠಾಣೆಗೆ ದೂರು…!

ಭಾರೀ ವಿಚಿತ್ರ ನಿದರ್ಶನವೊಂದರಲ್ಲಿ, ಗುಜರಾತ್‌ನ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನಗೆ ದೆವ್ವಗಳ ಗುಂಪೊಂದು ಕಿರುಕುಳ ಕೊಡುತ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

ವರ್ಸಾಂಗ್‌ಭಾಯ್‌ ಬಾರಿಯಾಸ್ಲೋ ಹೆಸರಿನ ಈ ವ್ಯಕ್ತಿ, ಆ ಗುಂಪಿನಲ್ಲಿ ಎರಡು ದೆವ್ವಗಳು ತನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡಿದ್ದು, ಜೀವ ರಕ್ಷಣೆ ನೀಡಬೇಕೆಂದು ಕೋರಿ ಪೊಲೀಸರ ಮೊರೆ ಹೋಗಿದ್ದಾನೆ. ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದೆವ್ವಗಳು ಹೀಗೆ ಬಂದು ಕಾಟ ಕೊಡುತ್ತಿರುವುದಾಗಿ ದೂರಿನಲ್ಲಿ ಆತ ತಿಳಿಸಿದ್ದಾನೆ.

ಈ ವಿಚಿತ್ರ ಕೋರಿಕೆಯಿಂದ ದಂಗುಬಡಿದ ಪೊಲೀಸರು ಮೊದಲಿಗೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಭಾವಿಸಿದ್ದರು. ಆದರೆ, ಆತನಿಗೆ ಭವಿಷ್ಯದಲ್ಲಿ ಯಾವುದೇ ಮಾನಸಿಕ ಸಮಸ್ಯೆ ಆಗದೇ ಇರಲೆಂದು ದೂರು ದಾಖಲಿಸಿಕೊಂಡಿದ್ದಾರೆ.

ಬಳಿಕ ಪೊಲೀಸರು ವರ್ಸಂಭಾಯ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದಾಗ ಆತ ಕೆಲ ದಿನಗಳಿಂದ ಸೈಕಿಯಾಟ್ರಿಕ್ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 10 ದಿನಗಳಿಂದ ಔಷಧ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...