alex Certify ಹಸುವಿನ ಮೇಲೆ ಸಿಂಹದ ದಾಳಿ; ಜೀವದ ಹಂಗು ತೊರೆದು ರಕ್ಷಿಸಿಕೊಂಡ ರೈತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿನ ಮೇಲೆ ಸಿಂಹದ ದಾಳಿ; ಜೀವದ ಹಂಗು ತೊರೆದು ರಕ್ಷಿಸಿಕೊಂಡ ರೈತ

ಸಿಂಹದ ದಾಳಿಯಿಂದ ತನ್ನ ಹಸುವನ್ನು ರೈತರೊಬ್ಬರು ಧೈರ್ಯದಿಂದ ಎದುರಿಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಗುಜರಾತ್‌ನ ಜುನಾಗಢ್‌ನಲ್ಲಿರುವ ಕೇಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೊಟಾಡಿಯಾ ಅವರ ಟ್ವೀಟ್ ಪ್ರಕಾರ, ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವು ಹಸುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇದನ್ನು ಕಂಡ ರೈತ ಹಸುವಿನ ಬಳಿಗೆ ಬರುತ್ತಾ ಅದನ್ನು ಸಿಂಹದ ದಾಳಿಯಿಂದ ರಕ್ಷಿಸಲು ಯತ್ನಿಸುತ್ತಾರೆ. ಸಿಂಹವನ್ನು ಬೆದರಿಸ್ತಿದ್ದಂತೆ ಅದು ಹಸುವನ್ನು ಬಿಟ್ಟುಬಿಡುತ್ತದೆ. ಸಿಂಹವನ್ನು ಹೆದರಿಸಲು ಧೈರ್ಯದಿಂದ ಪ್ರಯತ್ನಿಸುತ್ತಿರುವ ರೈತನ ವಿಡಿಯೋವನ್ನ ಇದೇ ದಾರಿಯಲ್ಲಿ ಹೋಗ್ತಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...