alex Certify ಗುಜರಾತ್ ವಿಧಾನಸಭಾ ಚುನಾವಣೆ: ಖಾಲಿ ಸಿಲಿಂಡರ್ ನೊಂದಿಗೆ ಬಂದು ಮತ ಚಲಾಯಿಸಿದ ವ್ಯಕ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ವಿಧಾನಸಭಾ ಚುನಾವಣೆ: ಖಾಲಿ ಸಿಲಿಂಡರ್ ನೊಂದಿಗೆ ಬಂದು ಮತ ಚಲಾಯಿಸಿದ ವ್ಯಕ್ತಿ….!

ಡಿಸೆಂಬರ್ 1ರ ಗುರುವಾರದಂದು ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆದಿದ್ದು, 89 ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇಕಡಾ 59.24 ರಷ್ಟು ಮತದಾನವಾಗಿದ್ದು, ಎರಡನೇ ಹಂತದ ಚುನಾವಣೆಗೆ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ.

ಮೊದಲ ಹಂತದ ಚುನಾವಣೆಯಲ್ಲಿ ಕೆಲವೊಂದು ವಿಶಿಷ್ಟ ಘಟನೆಗಳು ನಡೆದಿದ್ದು, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ವ್ಯಕ್ತಿಯೊಬ್ಬರು ಖಾಲಿ ಸಿಲಿಂಡರ್ ನೊಂದಿಗೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುರೂರ್ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಜಾಸ್ಮಿನ್ ಮರ್ಚೆಂಟ್ ಎಂಬ ಈ ಪುರುಷ ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಳೆದ ರಾತ್ರಿ ಸಿಲಿಂಡರ್ ನನ್ನ ಕನಸಿನಲ್ಲಿ ಬಂದಿತ್ತು. ನಾನೂ ಕೂಡ ಮತ ಚಲಾಯಿಸಬೇಕು ಎಂಬ ಬೇಡಿಕೆ ಇಟ್ಟ ಕಾರಣ ಇದನ್ನು ಹೊತ್ತು ತಂದಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...