ಗುಜರಾತ್‌ನಲ್ಲಿರುವ ರಾಷ್ಟ್ರೀಯ ಕೆಡೆಟ್ ಕೋರ್ (ಎನ್‌ಸಿಸಿ) ಅಭ್ಯರ್ಥಿಗಳು ಕಾರ್ಗಿಲ್ ಹೀರೋಗಳಿಗೆ ಧನ್ಯವಾದದ ಪತ್ರ ಕಳುಹಿಸುವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.
1999ರ ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ಅತಿಕ್ರಮಿಸಿಕೊಂಡಿದ್ದ ಕಾಶ್ಮೀರದ ಕೆಲವೊಂದು ಪ್ರದೇಶಗಳನ್ನು ಭಾರತೀಯ ಪಡೆಗಳ ಮರುವಶ ಮಾಡಿಕೊಂಡ ಗೆಲುವಿನ ಸ್ಮರಣಾರ್ಥ ಜುಲೈ 26ರಂದು ’ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ.
ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು
ವಿಜಯ್ ದಿವಸ್‌ನ 22ನೇ ವರ್ಷಾಚರಣೆ ಪ್ರಯುಕ್ತ ’ಗುಜರಾತ್ ಥ್ಯಾಂಕ್ಸ್ ಕಾರ್ಗಿಲ್ ಹೀರೋಸ್’ ಅಭಿಯಾನದ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಯುದ್ಧದಲ್ಲಿ ಗೆದ್ದು ವಿಜಯಪತಾಕೆ ಹಾರಿಸಿ ಬಂದ ಭಾರತೀಯ ಸೇನೆಯ ಯೋಧರಿಗೆ ಧನ್ಯವಾದ ತಿಳಿಸುವ ಅಭಿಯಾನ ಇದಾಗಿದೆ.
ಉತ್ತರಾಖಂಡ್ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ ಸಿಂಗ್ ಧಾಮಿ ಆಯ್ಕೆ
ಈ ಅಭಿಯಾನಕ್ಕೆ ಲಂಡನ್‌ನ ’ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ನ ಪ್ರಮಾಣಪತ್ರ ಬಂದಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಪ್ರಮಾಣ ಪತ್ರವನ್ನು ಎನ್‌ಸಿಸಿ ನಿದೇರ್ಶನಾಲಯದ ಹೆಚ್ಚುವರಿ ಮಹಾನಿರ್ದೇಶಕ ಅರವಿಂದ್ ಕಪೂರ್‌ಗೆ ಹಸ್ತಾಂತರಿಸಿದ್ದಾರೆ.