alex Certify ಚುನಾವಣಾ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್‌ ಶಾಕ್:‌ ಪಕ್ಷ ತೊರೆದು ʼಆಪ್‌ʼ ಸೇರಿದ ಗುಜರಾತ್ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್‌ ಶಾಕ್:‌ ಪಕ್ಷ ತೊರೆದು ʼಆಪ್‌ʼ ಸೇರಿದ ಗುಜರಾತ್ ಶಾಸಕ

ಗುಜರಾತ್‌ ವಿಧಾನಸಭಾ ಚುನಾವಣಾ ಕಣ ರಂಗೇರ್ತಿದ್ದಂತೆ ಆಡಳಿತ ಪಕ್ಷಕ್ಕೆ ಶಾಕ್ ಸಿಕ್ಕಿದೆ. ಪಕ್ಷದಿಂದ ಟಿಕೆಟ್ ಸಿಗದ ಕಾರಣ ಖೇಡಾ ಜಿಲ್ಲೆಯ ಮತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಶಾಸಕರಾದ ಕೇಸರಿಸಿಂಹ ಸೋಲಂಕಿ‌, ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದ್ದಾರೆ.

ಮತರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಕೇಸರಿಸಿಂಹ ಸೋಲಂಕಿ ಅವರು ಎಎಪಿ ಸೇರಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಕೇಸರಿಸಿಂಹ ಸೋಲಂಕಿ ಜಿ, ಜನಪ್ರಿಯ, ಶ್ರಮಜೀವಿ, ಮತರ್ ವಿಧಾನಸಭಾ ಕ್ಷೇತ್ರದ ನಿರ್ಭೀತ ಶಾಸಕ. ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ ರಾಜಕಾರಣದಿಂದ ಪ್ರೇರಿತರಾಗಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ. ನಾನು ಶ್ರೀ ಕೇಸರಿ ಸಿನ್ಹ್ ಜಿ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಗುಜರಾತ್‌ನಲ್ಲಿ ಪ್ರಾಮಾಣಿಕ ಸರ್ಕಾರವನ್ನು ರಚಿಸುತ್ತೇವೆ ಎಂದು ಇಟಾಲಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಾಜ್ಯ ಚುನಾವಣೆಗೆ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ ಆಡಳಿತಾರೂಢ ಬಿಜೆಪಿ, 2014 ಮತ್ತು 2017 ರಲ್ಲಿ ಸೋಲಂಕಿ ಪ್ರತಿನಿಧಿಸಿದ್ದ ಮತರ್ ಸ್ಥಾನಕ್ಕೆ ಕಲ್ಪೇಶ್ ಪರ್ಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...