alex Certify ಕಾರಿನಲ್ಲಿ ನೃತ್ಯ ಮಾಡಿದ ಪೊಲೀಸ್ ಪೇದೆಗಳು ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ನೃತ್ಯ ಮಾಡಿದ ಪೊಲೀಸ್ ಪೇದೆಗಳು ಸಸ್ಪೆಂಡ್

ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಕುಣಿಯುತ್ತಾ ವಿಡಿಯೋ ಮಾಡಿಕೊಂಡು ವೈರಲ್ ಆಗಿರುವ ಮೂವರು ಪೇದೆಗಳನ್ನು ಗುಜರಾತ್ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಮವಸ್ತ್ರದಲ್ಲಿರುವ ನಾಲ್ವರು ಪೇದೆಗಳು ಕಾರಿನ ಸ್ಟಿರಿಯೋ ಸೆಟ್‌ನಲ್ಲಿ ಬರುತ್ತಿರುವ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ಪೇದೆಗಳು ಸೇಫ್ಟಿ ಬೆಲ್ಟ್‌ಗಳನ್ನಾಗಲೀ, ಮಾಸ್ಕ್‌ಗಳನ್ನಾಗಲೀ ಧರಿಸಿರಲಿಲ್ಲ.

ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಇನ್ಶೂರೆನ್ಸ್ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಲಾಭ

ಜಗದೀಶ್ ಸೋಲಂಕಿ, ಹರೇಶ್ ಚೌಧರಿ ಮತ್ತು ರಾಜಾ ಹಿರಾಗಾರ್‌ ಎಂದು ಗುರುತಿಸಲಾದ ಈ ಪೇದೆಗಳು ಗಾಂಧಿಧಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಕಚ್ಛ್‌-ಗಾಂಧಿಧಾಮದ ಪೊಲೀಸ್ ವರಿಷ್ಠಾಧಿಕಾರಿ ಮಯೂರ್‌ ಪಾಟೀಲ್, ತಕ್ಷಣದಿಂದಲೇ ಮೂವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...