ಬೆಂಗಳೂರು: ಕರ್ನಾಟಕ ಸಾರ್ವಜನಿಕ ರೋಗಗಳ ಸುಗ್ರೀವಾಜ್ಞೆ – 2020 ಸುಗ್ರೀವಾಜ್ಞೆ ತಿದ್ದುಪಡಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಕಲಾಗುವುದು.
ದೈಹಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದರೆ ಹೋಟೆಲ್, ಚಿತ್ರಮಂದಿರ, ಮಾಲ್, ಅಂಗಡಿಗಳಿಗೆ ದಂಡ ವಿಧಿಸಲಾಗುವುದು. ಸ್ವಸಹಾಯ ಪದ್ಧತಿ ಹೋಟೆಲ್ ಗಳಾದ ದರ್ಶನಿ, ಸಣ್ಣ ಅಂಗಡಿ, ಫಾಸ್ಟ್ ಫುಡ್ ಮಳಿಗೆಗಳು ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎನ್ನಲಾಗಿದೆ.
ಅದೇ ರೀತಿ ಎಸಿ ರೆಸ್ಟೋರೆಂಟ್, ಪಾರ್ಟಿ ಹಾಲ್, ಅಂಗಡಿ-ಮುಂಗಟ್ಟು, ಖಾಸಗಿ ಬಸ್ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘಿಸಿದರೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.