ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ ಹಿಂದಿರುಗಿದ್ದಾರೆ ಈ ಅಥ್ಲೀಟ್.
ಅರ್ಹತಾ ಸುತ್ತಿನ ಓಟವೊಂದರಲ್ಲಿ ನಾಲ್ಕನೇಯವರಾಗಿ ರೇಸ್ ಮುಗಿಸಿದ ಕಯುಲಾ ಸಾವರಿಸಿಕೊಳ್ಳುತ್ತಿರುವ ವೇಳೆ ಆಕೆಯ ಬಳಿ ಬಂದ ಕೋಚ್ ಮ್ಯಾನುಯೆಲ್ ಆಂಟೋನಿಯೋ ವಾಜ಼್ ಡ ವೆಗಾ ಮಂಡಿಯೂರಿ ತನ್ನನ್ನು ಮದುವೆಯಾಗಲು ಕೋರಿದ್ದಾರೆ.
ನಿನಗೆ ಕಾಂಡೋಮ್ ಸರಿಯಾಗಿ ಬಳಸಲು ಬರುತ್ತಾ…..? ಅಧಿಕಾರಿಗಳು ಈ ಪ್ರಶ್ನೆ ಕೇಳಿದ್ದೇಕೆ….?
ಇದಕ್ಕೆ ನಿದ್ರೆಯಾ ’ಎಸ್’ ಎನ್ನುವ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದನ್ನು ಆನ್ಲೈನ್ ಶೇರ್ ಮಾಡಲಾಗಿದೆ. ಪ್ಯಾರಾ ಅಥ್ಲೀಟ್ಸ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋದ ಜಿಐಎಫ್ ಶೇರ್ ಮಾಡಲಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.