alex Certify ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು

ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಬಾರ್​ ಬಾರ್​ ದೇಖೋ ಚಿತ್ರದ ʼಕಾಲಾ ಚಶ್ಮಾʼ ಹಾಡು 2018 ರಲ್ಲಿ ಬಿಡುಗಡೆಯಾಯಿತು. ಆದರೆ ಅದರ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ.

ನಾರ್ವೇಯನ್​ ಡ್ಯಾನ್ಸ್​ ಗ್ರೂಪ್​ ಈ ಹಾಡಿಗೆ ಫುಟ್​ ಟ್ಯಾಪಿಂಗ್​ ಕೊರಿಯೋಗ್ರಫಿಯೊಂದಿಗೆ ಪೆಪ್ಪಿ ಟ್ವಿಸ್ಟ್​ ನೀಡಿದ್ದಾರೆ. ಜನಪ್ರಿಯ ಹಾಡಿಗೆ ಪೆಪ್ಪಾ ಪಿಗ್ಸ್​ನಂತೆ ಡ್ರೆಸ್​ ಮಾಡಿದ ಜನರ ಗುಂಪೊಂದು ಡ್ಯಾನ್ಸ್​ ಮಾಡುತ್ತಿರುವ ವಿಡಿಯೊ ನೆಟ್ಟಿಗರ ಕ್ರೇಜ್​ ಹೆಚ್ಚಿಸಿದೆ.

ಈ ವಿಡಿಯೋವನ್ನು ಕಾವ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ಮಕ್ಕಳ ಪಾರ್ಟಿಯಲ್ಲಿ ಹಾಡಿಗೆ ಡ್ಯಾನ್ಸ್​ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಕ್ಲಿಪ್​ ಸಾಕಷ್ಟು ವೀಕ್ಷಣೆ ಕಂಡಿದ್ದು, ನೆಟ್ಟಿಗರು ಖುಷಿಪಟ್ಟು ಕಾಮೆಂಟ್​ ಮಾಡಿದ್ದು, ಡ್ಯಾನ್ಸ್ ​ಸ್ಟೆಪ್ಸ್​ ಅಚ್ಚುಕಟ್ಟಾಗಿ ಪ್ರದರ್ಶಿಸಿದ ತಂಡವನ್ನು ಶ್ಲಾಘಿಸಿದ್ದಾರೆ.

ಹಾಡು ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಭಾರತ ತಂಡದ ಉಪನಾಯಕ ಶಿಖರ್​ ಧವನ್​ ಡ್ಯಾನ್ಸ್​ ಮಾಡುವ ಮೂಲಕ ಜಿಂಬಾಬ್ವೆ ವಿರುದ್ಧದ ಗೆಲುವನ್ನು ಆಚರಿಸುವ ವಿಡಿಯೊ ಹಂಚಿಕೊಂಡಿದ್ದಾರೆ. ತಂಡದ ಇತರ ಸದಸ್ಯರು ಹೆಜ್ಜೆ ಹಾಕಿದ್ದಾರೆ. ಇದು ಸಾವಿರಾರು ಲೈಕ್​ ಕಾಮೆಂಟ್​ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...