ಫೆಬ್ರವರಿ 2019ರಲ್ಲಿ ನಡೆದ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ರಿಗೆ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ವೀರ ಚಕ್ರವನ್ನು ನೀಡಿ ಗೌರವಿಸಿದ್ದಾರೆ. ಅಭಿನಂದನ್ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಏಕೈಕ ಮಿಗ್ 21 ಪೈಲಟ್ ಆಗಿದ್ದಾರೆ.
2019ರ ಫೆಬ್ರವರಿ 26ರಂದು ಬಾಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆದಿತ್ತಿ. ಈ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಅಭಿನಂದನ್ ಪಾಕಿಸ್ತಾನದ ಎಫ್ 16ನ್ನು ಹೊಡೆದುರುಳಿಸಿದ್ದರು. ಆದರೆ ಅಭಿನಂದನ್ ಅವರಿದ್ದ ಮಿಗ್ 21 ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿ ಹೊಡೆದುರುಳಿಸಿದ ಪರಿಣಾಮ ಅವರನ್ನು ಪಾಕ್ ಸೇನೆಯು ವಶಪಡಿಸಿಕೊಂಡಿತ್ತು.
ಆಗ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಪಾಕಿಸ್ತಾನದ ವಶದಲ್ಲಿದ್ದ ವೇಳೆ ಪಾಕಿಸ್ತಾನವು ಸಾಕಷ್ಟು ವಿಡಿಯೋಗಳನ್ನು ಹರಿಬಿಟ್ಟಿತ್ತು. ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ಅಭಿನಂದನ್ ವರ್ಧಮಾನ್ ಎಷ್ಟೇ ಒತ್ತಡ ಹಾಕಿದರೂ ಸಹ ಭಾರತದ ಕಾರ್ಯಾಚರಣೆಗಳ ಬಗ್ಗೆ ಕೂದಲೆಳೆಯ ಮಾಹಿತಿಯನ್ನೂ ಬಿಟ್ಟು ಕೊಡದೇ ದೇಶ ಪ್ರೇಮ ಮೆರೆದಿದ್ದರು. ಅಭಿನಂದನ್ರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ ಭಾರತ ಪಾಕ್ನ ಮೇಲೆ ಜಾಗತಿಕವಾಗಿ ಒತ್ತಡ ಹೇರುವ ಮೂಲಕ ಅಭಿನಂದನ್ರನ್ನು ತಾಯ್ನಾಡಿಗೆ ವಾಪಸ್ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿತ್ತು.