ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್ಟಾಕ್ನಲ್ಲಿ ಸುಮಾರು 6 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಮದುವೆಯ ದಿನದಂದು ದಂಪತಿ ಆರತಕ್ಷತೆ ಸಮಾರಂಭಕ್ಕೆ ಆಗಮಿಸಿದ್ದು, ವೇದಿಕೆ ಮೇಲೆ ಏರಿದ ಬಳಿಕ ವರನು ಪ್ರೊಜೆಕ್ಟರ್ನಲ್ಲಿ ವಿಡಿಯೊವನ್ನು ಪ್ಲೇ ಮಾಡುವ ಮೂಲಕ ತನ್ನ ಸಹೋದರಿಯ ಪತಿಯೊಂದಿಗೆ ತನ್ನ ಹೆಂಡತಿಯ ಸಂಬಂಧವನ್ನು ಬಹಿರಂಗಪಡಿಸಲು ಮುಂದಾಗಿದ್ದಾನೆ. ಅದು ಬೆಡ್ ರೂಂನ ಹಸಿಬಿಸಿ ದೃಶ್ಯವಾಗಿದ್ದು, ಏಕಾಏಕಿ ವೇದಿಕೆ ಮೇಲೆ ಗೊಂದಲ ಸೃಷ್ಟಿಯಾಗುತ್ತದೆ.
ವಿಡಿಯೊವನ್ನು ನೋಡಿದ ನಂತರ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ವರನು ಮಾಡಿದ ಈ ಪ್ರಯತ್ನದ ಬಗ್ಗೆ ನೆಟ್ಟಿಗರಿಂದ ಎರಡು ಬಗೆಯ ಅಭಿಪ್ರಾಯ ಬಂದಿದೆ. ವರನಿಗೆ ಈ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದರೆ ಮದುವೆಗೆ ಏಕೆ ತಯಾರಾಗಿದ್ದ ಎಂದು ಕೆಲವರು ಗೊಂದಲಕ್ಕೊಳಗಾಗಿದ್ದರು.