alex Certify ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ.

ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ ವೈರಲ್​ ಆಗಿದೆ.

ಮದುವೆಯ ದಿನದಂದು ದಂಪತಿ ಆರತಕ್ಷತೆ ಸಮಾರಂಭಕ್ಕೆ ಆಗಮಿಸಿದ್ದು, ವೇದಿಕೆ ಮೇಲೆ ಏರಿದ ಬಳಿಕ ವರನು ಪ್ರೊಜೆಕ್ಟರ್​ನಲ್ಲಿ ವಿಡಿಯೊವನ್ನು ಪ್ಲೇ ಮಾಡುವ ಮೂಲಕ ತನ್ನ ಸಹೋದರಿಯ ಪತಿಯೊಂದಿಗೆ ತನ್ನ ಹೆಂಡತಿಯ ಸಂಬಂಧವನ್ನು ಬಹಿರಂಗಪಡಿಸಲು ಮುಂದಾಗಿದ್ದಾನೆ. ಅದು ಬೆಡ್​ ರೂಂನ ಹಸಿಬಿಸಿ ದೃಶ್ಯವಾಗಿದ್ದು, ಏಕಾಏಕಿ ವೇದಿಕೆ ಮೇಲೆ ಗೊಂದಲ ಸೃಷ್ಟಿಯಾಗುತ್ತದೆ.

ವಿಡಿಯೊವನ್ನು ನೋಡಿದ ನಂತರ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ವರನು ಮಾಡಿದ ಈ ಪ್ರಯತ್ನದ ಬಗ್ಗೆ ನೆಟ್ಟಿಗರಿಂದ ಎರಡು ಬಗೆಯ ಅಭಿಪ್ರಾಯ ಬಂದಿದೆ. ವರನಿಗೆ ಈ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದರೆ ಮದುವೆಗೆ ಏಕೆ ತಯಾರಾಗಿದ್ದ ಎಂದು ಕೆಲವರು ಗೊಂದಲಕ್ಕೊಳಗಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...